alex Certify ಆರ್ಡರ್ ಮಾಡಿದ ನಾಲ್ಕು ವರ್ಷದ ಬಳಿಕ ಬಂದ ಪಾರ್ಸೆಲ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಡರ್ ಮಾಡಿದ ನಾಲ್ಕು ವರ್ಷದ ಬಳಿಕ ಬಂದ ಪಾರ್ಸೆಲ್…..!

ಆನ್ ಲೈನ್ ನಲ್ಲಿ ಬುಕ್ ಮಾಡಿದ್ದ ವಸ್ತುವನ್ನ ಟೆಕ್ಕಿಯೊಬ್ಬರು 4 ವರ್ಷದ ಬಳಿಕ ಸ್ವೀಕರಿಸಿದ್ದು ಅಚ್ಚರಿಪಟ್ಟಿದ್ದಾರೆ.

ಅಗ್ಗದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಚೀನಾ ಮೂಲದ ಜನಪ್ರಿಯ ಆನ್‌ಲೈನ್ ಮಾರುಕಟ್ಟೆ ಅಲಿ ಎಕ್ಸ್ ಪ್ರೆಸ್ ಅನ್ನು ಈಗ ಭಾರತದಲ್ಲಿ ನಿಷೇಧಿಸಲಾಗಿದೆ. ಆದಾಗ್ಯೂ ಸ್ವಲ್ಪ ಸಮಯದ ಹಿಂದೆ ಇದು ಭಾರತೀಯ ಟೆಕ್ಕಿಗಳಿಗೆ ಗೋ-ಟು ವೆಬ್‌ಸೈಟ್ ಆಗಿತ್ತು. ಭಾರತದಲ್ಲಿ ಲಭ್ಯವಿಲ್ಲದ ಕೆಲವು ಸಾಧನಗಳನ್ನು ಅಲಿ ಎಕ್ಸ್ ಪ್ರೆಸ್ ಮೂಲಕ ಚೀನಾದಿಂದ ಆರ್ಡರ್ ಮಾಡಬಹುದಾಗಿತ್ತು. ದೆಹಲಿ ಮೂಲದ ವ್ಯಕ್ತಿಯೊಬ್ಬರು ಸುಮಾರು ನಾಲ್ಕು ವರ್ಷಗಳ ಹಿಂದೆ ವೆಬ್‌ಸೈಟ್‌ನಿಂದ ಆರ್ಡರ್ ಮಾಡಿದ ವಸ್ತುವೊಂದು ಈಗ ತಲುಪಿದೆ ಎಂದು ಅಚ್ಚರಿ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್ ಗೂ ಮೊದಲು 2019ರಲ್ಲಿ ಆರ್ಡರ್ ಮಾಡಿದ್ದ ವಸ್ತುವನ್ನ ಇನ್ನೆಂದಿಗೂ ಪಡೆಯುವುದಿಲ್ಲ ಎಂದು ನಾನು ಭಾವಿಸುತ್ತಿದ್ದಾಗ, ನಾಲ್ಕು ವರ್ಷಗಳ ನಂತರವಾದರೂ ಸಮಯಕ್ಕೆ ಸರಿಯಾಗಿ ಪಾರ್ಸೆಲ್ ಬಂದಿದೆ ಎಂದಿದ್ದಾರೆ.

ದೆಹಲಿ ಮೂಲದ ನಿತಿನ್ ಅಗರ್ವಾಲ್ ಎಂಬ ಟೆಕ್ಕಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಅಸಾಧಾರಣ ಘಟನೆಯನ್ನು ಹಂಚಿಕೊಂಡಿದ್ದಾರೆ.
ಟ್ವಿಟರ್ ಪೋಸ್ಟ್‌ ನಲ್ಲಿ ನಿತಿನ್ ಅಗರ್ವಾಲ್ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ, “ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ! ನಾನು ಇದನ್ನು ಅಲಿ ಎಕ್ಸ್ ಪ್ರೆಸ್‌ನಿಂದ (ಈಗ ಭಾರತದಲ್ಲಿ ನಿಷೇಧಿಸಲಾಗಿದೆ) ಪಡೆದಿದ್ದೇನೆ. 2019 ರಲ್ಲಿ ಆರ್ಡರ್ ಮಾಡಿದ್ದ ಪಾರ್ಸೆಲ್ ಅನ್ನು ಇಂದು ತಲುಪಿಸಲಾಗಿದೆ.” ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...