alex Certify ಮದುವೆ ಹಾಲ್‌ ನಲ್ಲಿ ಬೆಂಕಿ: ಲಿಫ್ಟ್ ಒಳಗೆ ಸಿಲುಕಿದ್ದ ನಾಲ್ವರ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಹಾಲ್‌ ನಲ್ಲಿ ಬೆಂಕಿ: ಲಿಫ್ಟ್ ಒಳಗೆ ಸಿಲುಕಿದ್ದ ನಾಲ್ವರ ರಕ್ಷಣೆ

ದೆಹಲಿ: ಮದುವೆ ಸಮಾರಂಭ ನಡೆಯುತ್ತಿದ್ದ ಹಾಲ್ ಒಂದರಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಜನ ಗಾಬರಿಯಿಂದ ಎದ್ದು ಬಿದ್ದು ಓಡಿದ್ರುದಾರೆ. ಈ ನಡುವೆ ಗದ್ದಲದಲ್ಲಿ ಲಿಫ್ಟ್ ಒಳಗೆ ಸಿಲುಕಿದ್ದ ನಾಲ್ವರನ್ನು ಕೊನೆಗೂ ರಕ್ಷಿಸಲಾಗಿದೆ.

ದೆಹಲಿಯ ಜಿ.ಟಿ. ಕರ್ನಲ್ ರಸ್ತೆಯ ಶಕ್ತಿ ನಗರ ಎಂಬಲ್ಲಿನ ಗ್ರೀನ್ ಲಾಂಜ್ ಫ್ಯಾಶನ್ ಮ್ಯಾರೇಜ್ ಹಾಲ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಲಿಫ್ಟ್ ಒಳಗೆ ಸಿಲುಕಿದ್ದರು.

ಅದೃಷ್ಟವಶಾತ್ ಅಗ್ನಿಶಾಮಕ ದಳ ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿ, ಲಿಫ್ಟ್ ಮೇಲ್ಭಾಗವನ್ನು ಕತ್ತರಿಸಿ, ಈ ನಾಲ್ವರನ್ನೂ ಬಚಾವ್ ಮಾಡಿದ್ದಾರೆ. ಹೀಗೆ ಪ್ರಾಣಾಪಾಯದಿಂದ ಪಾರಾದವರನ್ನು ಸತೀಶ್ ಕುಮಾರ್ (70), ರಾಜಕುಮಾರಿ (67), ಶ್ರುತಿ (36) ಹಾಗೂ ರೋಶನ್ ಲಾಲ್ (80) ಎಂದು ಗುರುತಿಸಲಾಗಿದೆ.

ಈ ಪೈಕಿ ಮೂವರು ವಯೋವೃದ್ಧರೆಂಬುದು ಉಲ್ಲೇಖನೀಯ. ಅಗ್ನಿಶಾಮಕ ದಳ ಸಕಾಲದಲ್ಲಿ ಧಾವಿಸಿ ಬಂದು ಪಾರು ಮಾಡದಿದ್ದರೆ ನಮ್ಮ ಪ್ರಾಣಪಕ್ಷಿ ಹಾರಿ ಹೋಗುತ್ತಿತ್ತೆಂದು ನಾಲ್ವರೂ ಕೃತಜ್ಞತೆಯಿಂದ ಹೇಳಿದ್ದಾರೆ. ಅಗ್ನಿಶಾಮಕ ದಳದ ಈ ಸಾಹಸ ಕಾರ್ಯ ವಿಡಿಯೋ ಒಂದರಲ್ಲಿ ಸೆರೆಯಾಗಿದ್ದು, ಶ್ಲಾಘನೆಗೆ ಪಾತ್ರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...