alex Certify ಚೇತರಿಕೆ ಕಂಡ ರಾಷ್ಟ್ರ ರಾಜಧಾನಿಯ ವಾಯುಗುಣಮಟ್ಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೇತರಿಕೆ ಕಂಡ ರಾಷ್ಟ್ರ ರಾಜಧಾನಿಯ ವಾಯುಗುಣಮಟ್ಟ..!

ರಾಷ್ಟ್ರ ರಾಜಧಾನಿ ನವದೆಹಲಿ ವಾಯುಮಾಲಿನ್ಯದಿಂದ ತತ್ತರಿಸುತ್ತಿದೆ. ಅದ್ರಲ್ಲೂ ಚಳಿಗಾಲದ ಅವಧಿಯಲ್ಲಿ ದೆಹಲಿಯ ವಾತಾವರಣ ಮತ್ತಷ್ಟು ಹದಗೆಡುತ್ತದೆ. ಇತ್ತೀಚೆಗೆ ಅಂತೂ ದೆಹಲಿಯ ವಾಯುಗುಣಮಟ್ಟ ದಿನಕಳೆದಂತೆ ವಿಪರೀತ ಎನ್ನುವಂತ ಪರಿಸ್ಥಿತಿಗೆ ತಲುಪಿದೆ.‌

ಭಾರತದ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR) ಪ್ರಕಾರ, ದೆಹಲಿಯ ಗಾಳಿಯ ಗುಣಮಟ್ಟವು ತೀವ್ರವಾಗಿ‌ ಹಾನಿಯಾಗಿದ್ದು ಅತ್ಯಂತ ಸೂಕ್ಷ್ಮ‌ ವರ್ಗಕ್ಕೆ ಸೇರಿದೆ ಎಂದು ಮಾಹಿತಿ‌ ನೀಡಿದೆ.

BIG NEWS: ಬಚ್​ಪನ್​ ಕಾ ಪ್ಯಾರ್​ ಖ್ಯಾತಿಯ ಬಾಲಕನಿಗೆ ಅಪಘಾತ; ತಲೆಗೆ ಬಲವಾದ ಪೆಟ್ಟು

ದೆಹಲಿಯ ಒಟ್ಟಾರೆ ವಾಯು ಗುಣಮಟ್ಟದ ಇಂಡೆಕ್ಸ್‌ (AQI) . ಪ್ರಸ್ತುತ 286ಕ್ಕೆ ಇಳಿಕೆಯಾಗಿದ್ದು ಈ ವಾರದ ಉತ್ತಮ ಸೂಚ್ಯಂಕ ಇದು ಎಂದು ವರದಿಯಾಗಿದೆ. ಕಳೆದ ವಾರದಲ್ಲಿ 430ಕ್ಕೇರಿದ್ದ ದೆಹಲಿಯ ವಾಯು ಗುಣಮಟ್ಟದ ಸೂಚ್ಯಂಕ‌, ರಾಜಧಾನಿಯ ವಾಯುಗುಣಮಟ್ಟ ಅತ್ಯಂತ ಕಳಪೆ ಸ್ಥಿತಿಗೆ ತಲುಪಿದೆ ಎಂದು ಹೇಳಲಾಗ್ತಿತ್ತು ಆದರೆ ಕಳೆದ ಎರಡು ದಿನಗಳಿಂದ ಸಣ್ಣ ಪ್ರಮಾಣದ ಚೇತರಿಕೆ ಕಾಣುತ್ತಿದೆ.

ಭಾರತದ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ ಪ್ರಕಾರ, AQI ಅಂದರೆ ವಾಯು ಗುಣಮಟ್ಟದ ಸೂಚ್ಯಂಕ ಶೂನ್ಯ ಮತ್ತು 50 ಇದ್ದರೆ ಉತ್ತಮ, 51 ಮತ್ತು 100 ರ ನಡುವೆ ಇದ್ದರೆ ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ, ಮತ್ತು AQI ನಡುವೆ 401 ಮತ್ತು 500 ಅನ್ನು ತೀವ್ರ ಎಂದು ಪರಿಗಣಿಸಲಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ದೆಯಲಿ ವಾಯು ಗುಣಮಟ್ಟ ಕಳೆದೆರಡು ದಿನಗಳಿಂದ ಸಣ್ಣ ಚೇತರಿಕೆ ಕಂಡುಕೊಂಡಿದ್ದು, ಹೀಗೆ ಮುಂದುವರೆದರೆ ಇನ್ನು ಉತ್ತಮ‌ ಸ್ಥಿತಿಗೆ ತಲುಪಬಹುದು ಎಂದು ಹೇಳಲಾಗ್ತಿದೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...