alex Certify BIG NEWS: ಬಚ್​ಪನ್​ ಕಾ ಪ್ಯಾರ್​ ಖ್ಯಾತಿಯ ಬಾಲಕನಿಗೆ ಅಪಘಾತ; ತಲೆಗೆ ಬಲವಾದ ಪೆಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಚ್​ಪನ್​ ಕಾ ಪ್ಯಾರ್​ ಖ್ಯಾತಿಯ ಬಾಲಕನಿಗೆ ಅಪಘಾತ; ತಲೆಗೆ ಬಲವಾದ ಪೆಟ್ಟು

ಬಚ್​ಪನ್​ ಕಾ ಪ್ಯಾರ್​​​ ಖ್ಯಾತಿಯ ಬಾಲಕ ಸಹದೇವ್​ ದಿರ್ಡೋ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ರಸ್ತೆ ಅಪಘಾತಕ್ಕೊಳಗಾಗಿದ್ದಾರೆ. ತಂದೆಯೊಂದಿಗೆ ಬೈಕಿನಲ್ಲಿ ತನ್ನ ಹಳ್ಳಿಗೆ ತೆರಳುತ್ತಿದ್ದ ವೇಳೆಯಲ್ಲಿ ಬೈಕ್​ನಿಂದ ಬಿದ್ದ ಪರಿಣಾಮ ಸಹದೇವ್​​ಗೆ ಗಾಯವುಂಟಾಗಿದೆ ಎಂದು ವರದಿಯಾಗಿದೆ.

ಗಾಯಗೊಂಡಿದ್ದ ಸಹದೇವ್​ನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಈತನನ್ನು ಜಗ್ದಾಲ್ಪುರದ ಮೆಡಿಕಲ್​ ಕಾಲೇಜಿಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಸಹದೇವ್​​ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದ್ದು ಈತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಸುಕ್ಮಾ ಜಿಲ್ಲಾಧಿಕಾರಿ ವಿನೀತ್​ ನಂದಾನ್ವರ್​ ಹಾಗೂ ಎಸ್ಪಿ ಸುನೀಲ್​ ಶರ್ಮಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಎಸ್​ಪಿ ಹಾಗೂ ಎಎಸ್ಪಿ ಚಾಂಡೇಲ್​ರ ಸೂಚನೆಯಂತೆ ಸಹದೇವ್​​​ರನ್ನು ನ್ಯೂರಾಲಜಿಸ್ಟ್​ ಬಳಿ ಕರೆದೊಯ್ಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...