alex Certify Shocking: ಪ್ಯಾಕ್ ಮಾಡಿದ ತಿಂಡಿ ಪೊಟ್ಟಣದಲ್ಲಿ ಸತ್ತ ಹಲ್ಲಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಪ್ಯಾಕ್ ಮಾಡಿದ ತಿಂಡಿ ಪೊಟ್ಟಣದಲ್ಲಿ ಸತ್ತ ಹಲ್ಲಿ ಪತ್ತೆ

ಚೆನ್ನೈ: ಪ್ಯಾಕ್ ಮಾಡಿದ ಪಕೋಡಾ ಪ್ಯಾಕೆಟ್‌ನೊಳಗೆ ಸತ್ತ ಹಲ್ಲಿ ಪತ್ತೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಬ್ಬಾ…..! 7 ಅಡಿ ಉದ್ದ ಬೆಳೆಯುತ್ತೆ ಈ ಮಹಿಳೆಯರ ತಲೆಗೂದಲು

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಲಯಂಕೊಟ್ಟೈನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ಅಕ್ಟೋಬರ್ 23ರಂದು ಸಮೀಪದ ಅಂಗಡಿಯಿಂದ ಪಕೋಡಾ ತಿಂಡಿ ಪೊಟ್ಟಣ ಖರೀದಿಸಿದ್ದರು ಎಂದು ಹೇಳಲಾಗಿದೆ. ಮನೆಯಲ್ಲಿ ಬಂದು ಪ್ಯಾಕೆಟ್ ತೆರೆದು ನೋಡುವಾಗ ಸತ್ತ ಹಲ್ಲಿ ಪತ್ತೆಯಾಗಿದೆ.

ಎರಡು ದಿನಗಳ ನಂತರ ಈ ವ್ಯಕ್ತಿಯು ವಾಟ್ಸಾಪ್ ಮುಖಾಂತರ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್ಎಸ್ಎಸ್ಎಐ) ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತನಿಖೆಗೆ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ.

ಹೆಲ್ಮೆಟ್ ಬದಲು ಪ್ಲಾಸ್ಟಿಕ್ ಕವರ್ ಧರಿಸಿದ ಮಹಿಳೆ….!

ಇನ್ನು ಅಂಗಡಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ವೇಳೆ ಅಂಗಡಿಯಲ್ಲಿ ದೂರು ನೀಡಿದ ಉತ್ಪನ್ನ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಂಗಡಿಯಲ್ಲಿದ್ದ ಇತರ ಕೆಲವು ವಸ್ತುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸುಖಾಸುಮ್ಮನೆ ತಮ್ಮನ್ನು ಸಿಲುಕಿಸಲು ಈ ರೀತಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಅಂಗಡಿ ಮಾಲೀಕರು ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...