alex Certify ತಾಯಿಗೆ ಕಿರುಕುಳ ನೀಡಿದ ತಂದೆಯನ್ನೇ ಹತ್ಯೆಗೈದ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಗೆ ಕಿರುಕುಳ ನೀಡಿದ ತಂದೆಯನ್ನೇ ಹತ್ಯೆಗೈದ ಪುತ್ರ

ದಾವಣಗೆರೆ: ಕುಡಿದು ಬಂದು ಪ್ರತಿ ದಿನ ತಾಯಿಯೊಂದಿಗೆ ಜಗಳವಾಡುತ್ತಿದ್ದ ತಂದೆಯನ್ನು ಮಗ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕವಳಿ ತಾಂಡಾದ ಎಸ್.ಆರ್. ಕ್ಯಾಂಪ್ ನಲ್ಲಿ ನಡೆದಿದೆ.

ಮಂಜುನಾಥ ರೆಡ್ಡಿ(60) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಆರೋಪಿ ಪುತ್ರ ತಿಪ್ಪೇಶನನ್ನು ಬಸವಾಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಂಜುನಾಥ ರೆಡ್ಡಿ ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಅದೇ ರೀತಿ ಬುಧವಾರ ರಾತ್ರಿ ಕುಡಿದು ಬಂದು ಹಣ ಕೊಡುವಂತೆ ಪತ್ನಿಗೆ ಪೀಡಿಸಿದ್ದಾನೆ. ದಂಪತಿ ನಡುವೆ ಜಗಳ ತಾರಕಕ್ಕೇರಿದ್ದು, ಮಗ ತಿಪ್ಪೇಶನಿಗೂ ಬೈದಿದ್ದಾನೆ. ಇದರಿಂದ ಆಕ್ರೋಶಗೊಂಡ ತಿಪ್ಪೇಶ್ ತಂದೆಯ ಕೈಯಲ್ಲಿದ್ದ ಮಚ್ಚು ಕಸಿದುಕೊಂಡು ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...