alex Certify ಮದುವೆಗೆ ಮೊದಲೇ ಮಗು, ಸಂಗಾತಿಯ ಭವಿಷ್ಯದ ಪ್ಲಾನ್​ ಬಗ್ಗೆ ತಿಳಿದುಕೊಳ್ಳಲು ಕೋರ್ಟ್​ ಮೆಟ್ಟಿಲೇರಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಮೊದಲೇ ಮಗು, ಸಂಗಾತಿಯ ಭವಿಷ್ಯದ ಪ್ಲಾನ್​ ಬಗ್ಗೆ ತಿಳಿದುಕೊಳ್ಳಲು ಕೋರ್ಟ್​ ಮೆಟ್ಟಿಲೇರಿದ ಮಹಿಳೆ

ಪ್ರೀತಿ -ಪ್ರೇಮ ಹೊಸದರಲ್ಲಿ ತುಂಬಾನೇ ಸವಿಯಾಗಿರುತ್ತೆ. ಸಮಯ ಕಳೆದಂತೆಲ್ಲ ಇದೇ ಸಂಬಂಧ ಕಿರಿಕಿರಿ ಎನಿಸಬಹುದು.ಇದೇ ಕಿರಿಕಿರಿ ಮುಂದುವರಿದು ಕೊನೆಗೆ ಬ್ರೇಕಪ್​ ಕೂಡ ಆಗಬಹುದು. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಸಂಗಾತಿಯ ಭವಿಷ್ಯದ ಪ್ಲಾನ್​ ಏನಿದೆ ಅನ್ನೋದನ್ನ ತಿಳಿದುಕೊಳ್ಳೋಕೆ ಕೋರ್ಟ್​ ಮೆಟ್ಟಿಲೇರಿದ್ದಾಳೆ.

ಪೂರ್ವ ಆಫ್ರಿಕಾದ ಝಾಂಬಿಯಾದ 26 ವರ್ಷದ ಮಹಿಳೆ ಗಟ್ರೂಡ್​ ನಗೋಮಾ 28 ವರ್ಷದ ಹರ್ಬಟ್​ ಸಲೈಕಿ ಜೊತೆ 8 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದಳು. ಈ ಜೋಡಿಗೆ ಒಂದು ಮಗು ಕೂಡ ಜನಿಸಿತ್ತು. ಹರ್ಬಟ್​ ನಗೋಮಾಳನ್ನ ಮದುವೆಯಾಗೋದಾಗಿ ಮಾತನ್ನ ನೀಡಿದ್ದನಂತೆ. ಆದರೆ, ಕಾಲ ಕ್ರಮೇಣ ಹರ್ಬಟ್​ ಪ್ರಾಮಾಣಿಕತೆ ಮೇಳೆ ನಗೋಮಾಗೆ ಅನುಮಾನ ಉಂಟಾಗಿದೆ. ಆತ ಈ ಸಂಬಂಧವನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ನಿರ್ಧರಿಸಿದ ಮಹಿಳೆ ಆತನ ಭವಿಷ್ಯದ ಕನಸಿನ ಬಗ್ಗೆ ತಿಳಿದುಕೊಳ್ಳಲು ಆತನನ್ನ ಕೋರ್ಟ್​ಗೆ ಕರೆದೊಯ್ದಿದ್ದಾಳೆ .
ಇದಕ್ಕೆ ಕೋರ್ಟ್​ನಲ್ಲಿ ಸಮರ್ಥನೆ ನೀಡಿದ ಹರ್ಬಟ್​, ತಾನು ಮದುವೆಯಾಗಲು ಬಯಸಿದ್ದು ನಿಜ. ಆದರೆ ನಮ್ಮಿಬ್ಬರ ನಡುವೆ ಈಗ ಹೊಂದಾಣಿಕೆ ಕಡಿಮೆಯಾಗಿದೆ. ಅಲ್ಲದೇ, ಆಕೆಗೆ ನಾನು ವಧು ದಕ್ಷಿಣೆ ರೀತಿಯಲ್ಲಿ ಲೊಬೊಲಾ ಹಣ ಪಾವತಿಸಿದ್ದೇನೆ ಎಂದು ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...