alex Certify ಮನಿ ಹೀಸ್ಟ್‌ನ ‘ಬೆಲ್ಲಾ ಸಿಯಾವೊ’ ಗೆ ದೇಸಿ ಟ್ವಿಸ್ಟ್: ಡ್ಯಾನ್ಸರ್ಸ್ ಪರ್ಫಾಮೆನ್ಸ್ ಗೆ ಬೆರಗಾದ ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಿ ಹೀಸ್ಟ್‌ನ ‘ಬೆಲ್ಲಾ ಸಿಯಾವೊ’ ಗೆ ದೇಸಿ ಟ್ವಿಸ್ಟ್: ಡ್ಯಾನ್ಸರ್ಸ್ ಪರ್ಫಾಮೆನ್ಸ್ ಗೆ ಬೆರಗಾದ ನೆಟ್ಟಿಗರು..!

ಸ್ಪ್ಯಾನಿಷ್ ಥ್ರಿಲ್ಲರ್ ಸರಣಿ ಮನಿ ಹೀಸ್ಟ್‌ನ ಜನಪ್ರಿಯ ಹಾಡು ಬೆಲ್ಲಾ ಸಿಯಾವೊ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಬಹುಶಃ ನಿಮಗೆ ಗೊತ್ತಿರಬಹುದು. ಭಾರತೀಯರು ಕೂಡ ಈ ಹಾಡನ್ನು ಬಹಳ ಇಷ್ಟಪಟ್ಟಿದ್ದು, ಅಂತರ್ಜಾಲದಲ್ಲಿ ದೇಸಿ ನಿರೂಪಣೆಗಳಿಂದ ಹಾಡು ತುಂಬಿದೆ.

ಇದೀಗ ಜನಪ್ರಿಯ ಹಾಡು ಬೆಲ್ಲಾ ಸಿಯಾವೋ ದೇಸಿ ಆವೃತ್ತಿಗೆ ಮೂವರು ಡ್ಯಾನ್ಸರ್ಸ್ ಸಖತ್ತಾಗಿ ಕುಣಿದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಖುಷಿಪಡಿಸಿದೆ. ಇದೀಗ ವೈರಲ್ ವಿಡಿಯೋದಲ್ಲಿ, ಮುಂಬೈ ಮೂಲದ ಡ್ಯಾನ್ಸರ್ಸ್ ನಿಕೋಲ್ ಕಾನ್ಸೆಸ್ಸಾವೊ, ಅವೆಜ್ ದರ್ಬಾರ್ ಮತ್ತು ಸೋನಾಲ್ ದೇವರಾಜ್ ಅವರು ಮನಿ ಹೀಸ್ಟ್‌ನ ಪಾತ್ರಗಳಂತೆ ಕೆಂಪು ಜಂಪ್‌ಸೂಟ್‌ಗಳನ್ನು ಧರಿಸಿದ್ದಾರೆ. ಕೆಲವು ಸೆಕೆಂಡುಗಳ ನಂತರ ಅವರಲ್ಲಿ ಇಬ್ಬರು ಫ್ರೇಮ್‌ನಿಂದ ಹೊರಗೆ ಹೋಗಿದ್ದು, ಒಬ್ಬರೇ ಮಸ್ತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಈಕೆಯ ನರ್ತನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ವಿಡಿಯೋವನ್ನು ನಿಕೋಲ್ ಕಾನ್ಸೆಸ್ಸಾವ್ ಎಂಬುವವರು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು, ಒಂದು ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಾಡಿನ ಡ್ಯಾನ್ಸ್ ಗೆ ನೆಟ್ಟಿಗರು ಮನಸೋತಿದ್ದು, ಕಾಮೆಂಟ್ ವಿಭಾಗದಲ್ಲಿ ಪ್ರೀತಿಯ ಮಳೆ ಸುರಿಸಿದ್ದಾರೆ. ವ್ಹಾವ್….. ಡ್ಯಾನ್ಸರ್ಸ್ ಎಂಥಾ ಅದ್ಭುತ ಪ್ರದರ್ಶನ ತೋರಿದ್ದಾರೆ, ನೋಡಲು ಎರಡು ಕಣ್ಣುಗಳು ಸಾಲದು ಎಂಬಂತಹ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...