alex Certify ಪ್ರಯಾಣಿಕರ ಗಮನಕ್ಕೆ: ಆಗಸ್ಟ್​​ 1ರಿಂದ ಈ ಮಾರ್ಗದಲ್ಲಿ ಆರಂಭವಾಗಲಿದೆ ಇಂಡಿಗೋ ವಿಮಾನಯಾನ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರ ಗಮನಕ್ಕೆ: ಆಗಸ್ಟ್​​ 1ರಿಂದ ಈ ಮಾರ್ಗದಲ್ಲಿ ಆರಂಭವಾಗಲಿದೆ ಇಂಡಿಗೋ ವಿಮಾನಯಾನ ಸೇವೆ

ಇಂಡಿಗೋ ಏರ್​ಲೈನ್ಸ್ ಆಗಸ್ಟ್​ 1ನೇ ತಾರೀಖಿನಿಂದ ಹುಬ್ಬಳ್ಳಿಯಿಂದ ಚೆನ್ನೈ, ಬೆಂಗಳೂರು, ಗೋವಾ, ಕೊಚ್ಚಿನ್​​, ಮುಂಬೈ ಹಾಗೂ ಕಣ್ಣೂರಿಗೆ ವಿಮಾನ ಯಾನ ಸೇವೆ ಆರಂಭಿಸುತ್ತಿರೋದಾಗಿ ಮಾಹಿತಿ ನೀಡಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣವು ಒದಗಿಸಿರುವ ಮಾಹಿತಿಯ ಪ್ರಕಾರ ಈ ವಿಮಾನವು ಬೆಳಗ್ಗೆ 6:05ರ ಸುಮಾರಿಗೆ ಚೆನ್ನೈನಿಂದ ಹೊರಟು 8:10ರ ಸುಮಾರಿಗೆ ಹುಬ್ಬಳ್ಳಿ ತಲುಪಲಿದೆ ಎಂದು ತಿಳಿದು ಬಂದಿದೆ.

ಇದೇ ವಿಮಾನವು ಕೊಚ್ಚಿಗೆ ಬೆಳಗ್ಗೆ 8:35ರ ಸುಮಾರಿಗೆ ಹೊರಟು 10:20ರ ಸುಮಾರಿಗೆ ಕೇರಳ ತಲುಪಲಿದೆ. ಇದೇ ವಿಮಾನವು 10:50ರ ಸುಮಾರಿಗೆ ಕೊಚ್ಚಿಯಿಂದ ಮಧ್ಯಾಹ್ನ 12:40ಕ್ಕೆ ಹುಬ್ಬಳ್ಳಿ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ಮುಂಬೈನತ್ತ ಪ್ರಯಾಣಿಸುವ ಈ ವಿಮಾನವು ಮಧ್ಯಾಹ್ನ 2:45ರ ವೇಳೆಗೆ ಕೊನೆಯ ನಿಲ್ದಾಣವನ್ನು ತಲುಪಲಿದೆ.

ಮುಂಬೈನಿಂದ 3:15ಕ್ಕೆ ಹೊರಡುವ ವಿಮಾನವು ಸಂಜೆ 4:40ರ ಸುಮಾರಿಗೆ ಹುಬ್ಬಳ್ಳಿಗೆ ತಲುಪಲಿದೆ. ಇದೇ ವಿಮಾನವು ಸಂಜೆ 5:20ಕ್ಕೆ ಕಣ್ಣೂರಿಗೆ ಹೊರಟು ಸಂಜೆ 7ರ ಸುಮಾರಿಗೆ ನಿಲ್ದಾಣ ತಲುಪಲಿದೆ. ಇದೇ ವಿಮಾನವು ರಾತ್ರಿ 8:35ಕ್ಕೆ ಬೆಂಗಳೂರಿಗೆ ಹೊರಟು 9:55ರ ಸುಮಾರಿಗೆ ಕೊನೆಯ ನಿಲ್ದಾಣ ತಲುಪಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...