alex Certify ಮಗುವಿನ ಖಾಸಗಿ ಅಂಗದ ಫೋಟೋ ಹಂಚಿಕೊಂಡಿದ್ದಕ್ಕೆ ಗೂಗಲ್‌ ಖಾತೆಯನ್ನೇ ಕಳೆದುಕೊಂಡ ವೈದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ಖಾಸಗಿ ಅಂಗದ ಫೋಟೋ ಹಂಚಿಕೊಂಡಿದ್ದಕ್ಕೆ ಗೂಗಲ್‌ ಖಾತೆಯನ್ನೇ ಕಳೆದುಕೊಂಡ ವೈದ್ಯ

ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ವೈದ್ಯಕಿಯ ಉದ್ದೇಶಕ್ಕಾಗಿ ತಂದೆಯೊಬ್ಬರು ತನ್ನ ಪುಟ್ಟ ಮಗನ ತೊಡೆಸಂದಿನ ಫೋಟೋ ಬಳಸಿದ್ದಕ್ಕೆ “ಹಾನಿಕಾರಕ ವಿಷಯ” ಎಂದು ಉಲ್ಲೇಖಿಸಿ ಅವರ ಗೂಗಲ್​ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ಪ್ರಸಂಗ ನಡೆದಿದೆ.

“ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ” ಆರೋಪ ಆಧಾರದಲ್ಲಿ ಪೋಲೀಸರ ತನಿಖೆ ಕೂಡ ನಡೆಯಿತು. ಇದು ನಡೆದಿದ್ದು ಫೆಬ್ರವರಿ 2021ಕ್ಕೂ ಹಿಂದೆ. ಕೋವಿಡ್​ 19ರ ವ್ಯಾಪಕ ಹರಡುವಿಕೆಯಿಂದಾಗಿ ಜಗತ್ತು ಲಾಕ್​ಡೌನ್​ ಆಗಿತ್ತು. ಈ ವೇಳೆ ಆನ್​ಲೈನ್​ನಲ್ಲಿ ವೈದ್ಯಕಿಯ ಸಮಾಲೋಚನೆ ನಡೆಯುತ್ತಿದ್ದವು.

ಈ ಸಂದರ್ಭದಲ್ಲಿ ಆನ್​ಲೈನ್​ ಪರೀಕ್ಷೆಗಾಗಿ, ಸಮಾಲೋಚನೆ ನಡೆಸಲು ವೈದ್ಯರಿಗೆ ಕಳುಹಿಸುವ ಉದ್ದೇಶದಿಂದ ತನ್ನ ಅಂಬೆಗಾಲಿಡುವ ಮಗನ ಶಿಶ್ನದ ಫೋಟೋಗಳನ್ನು ತನ್ನ ಹೆಂಡತಿಯೊಂದಿಗೆ ಹಂಚಿಕೊಂಡಿದ್ದಕ್ಕೆ ತೊಂದರೆಗೆ ಸಿಲುಕಿದ್ದರು.

ವೈದ್ಯಕೀಯ ಸಮಸ್ಯೆಗೆ ವೈದ್ಯರು ಚಿಕಿತ್ಸೆ ನೀಡಿದ್ದರು. ದಾಖಲೆ ಉದ್ದೇಶದಿಂದ ಮಾರ್ಕ್​ನ ಫೋಟೋಗಳನ್ನು ಗೂಗಲ್​ ಕ್ಲೌಡ್​ಗೆ ಅಪ್​ಲೋಡ್​ ಮಾಡಲು ಬಳಸಲಾಗುತ್ತದೆ. ಈ ವೇಳೆ ಗೂಗಲ್​ನ ರೀವ್ಯೂ ತಂಡದ ಅಲ್ಗಾರಿದಮ್​ನಿಂದ ಮಾರ್ಕ್​ ಖಾತೆಯನ್ನು ಶಾಶ್ವತವಾಗಿ ಡಿಲೀಟ್​ ಮಾಡಲಾಗಿದೆ.

ಮರುಪಡೆಯುವಿಕೆಗೆ ಯಾವುದೇ ಅವಕಾಶವೇ ಇರಲಿಲ್ಲ. ಪೋಲೀಸ್​ ತನಿಖೆಯ ನಂತರ, ಮಾರ್ಕ್​ ನಿರಪರಾಧಿ ಎಂದು ಕಂಡುಬಂದಿದೆ ಮತ್ತು ಅವನ ಮಗನ ಫೋಟೋಗಳನ್ನು ಲೈಂಗಿಕವಲ್ಲದ, ವೈದ್ಯಕಿಯ ಕಾರಣಗಳಿಗಾಗಿ ತೆಗೆದುಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಮಾರ್ಕ್​ಗೆ ಕಾನೂನುಬದ್ಧವಾಗಿ ಕ್ಲೀನ್​ ಚಿಟ್​ ನೀಡಲಾಗಿದ್ದರೂ, ಅವರ ಎಲ್ಲಾ ಫೋಟೋ ಮತ್ತು ಹಿಸ್ಟರಿ ಹುಡುಕಾಟದ ತನಿಖೆಯ ಸಮಯದಲ್ಲಿ, ಈ ಘಟನೆಯ ಆರು ತಿಂಗಳ ಮೊದಲು ತೆಗೆದ ಮತ್ತೊಂದು ವಿಡಿಯೊ ಸಿಕ್ಕಿದೆ ಎಂದು ವಿವರಣೆ ನೀಡಿ ಗೂಗಲ್​ ಖಾತೆ ಡಿಲೀಟ್​ ಮಾಡುವ ನಿರ್ಧಾರಕ್ಕೆ ಅಂಟಿಕೊಳ್ಳಲಾಯಿತು.

ಕಂಪನಿಯ ಪ್ರಕಾರ, ಕ್ಲಿಪ್​ನಲ್ಲಿ ಮಗು ತನ್ನ ತಾಯಿಯೊಂದಿಗೆ ಹಾಸಿಗೆಯಲ್ಲಿ ಮಲಗಿರುವುದು ಕಂಡುಬಂದಿದೆ. ಇದರ ನಂತರ, ಮಾರ್ಕ್​ ಅವರು ತಮ್ಮ ಹೆಂಡತಿ ಮತ್ತು ಮಗನನ್ನು ಒಳಗೊಂಡ ಒಂದು ಸುಂದರ ಕ್ಷಣವನ್ನು ಸೆರೆಹಿಡಿಯಲು ಕ್ಲಿಪ್​ ಅನ್ನು ರೆಕಾರ್ಡ್​ ಮಾಡಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...