alex Certify Cute Video | ಮರಿಗಳೊಂದಿಗೆ ವಿಹಾರಕ್ಕೆ ತೆರಳಿದ ಹುಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Cute Video | ಮರಿಗಳೊಂದಿಗೆ ವಿಹಾರಕ್ಕೆ ತೆರಳಿದ ಹುಲಿ

ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಕಾಡಿನಲ್ಲಿ ವಿಹಾರಕ್ಕೆ ತೆರಳಿರುವ ವಿಡಿಯೋವೊಂದು ವೈರಲ್ ಆಗಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ಹುಲಿ ಹಾಗೂ ಅದರ ಮರಿಗಳು ಭಾರೀ ಠೀವಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ತಾಯಿ ಹುಲಿ ತನ್ನೊಂದಿಗೆ ಕುಣಿದುಕೊಂಡು ಬರುತ್ತಿರುವ ಮರಿಗಳ ಮೇಲೆ ತೀವ್ರ ನಿಗಾ ಕಾಯ್ದುಕೊಂಡೇ ಮುಂದೆ ಹೆಜ್ಜೆ ಹಾಕುತ್ತಾ ಸಾಗುತ್ತಿದೆ.

“ನಿಮ್ಮ ತಾಯಿಯನ್ನು ಹಿಂಬಾಲಿಸಿಕೊಂಡು ಹೋಗುವುದೇ ಕ್ಯೂಟ್‌ನೆಸ್,” ಎಂದು ಕ್ಯಾಪ್ಷನ್ ಹಾಕಿ ವಿಡಿಯೋ ಟ್ವೀಟ್ ಮಾಡಿದ್ದಾರೆ ಸುಶಾಂತಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...