alex Certify ಗೃಹ ಬಳಕೆ `ಗ್ಯಾಸ್ ಸಿಲಿಂಡರ್’ ಬಳಸುವ ಗ್ರಾಹಕರೇ ಗಮನಿಸಿ : ಎರಡು ವರ್ಷಗಳಿಗೊಮ್ಮೆ ತಪ್ಪದೇ ಈ ಕೆಲಸ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹ ಬಳಕೆ `ಗ್ಯಾಸ್ ಸಿಲಿಂಡರ್’ ಬಳಸುವ ಗ್ರಾಹಕರೇ ಗಮನಿಸಿ : ಎರಡು ವರ್ಷಗಳಿಗೊಮ್ಮೆ ತಪ್ಪದೇ ಈ ಕೆಲಸ ಮಾಡಿ

ಬೆಂಗಳೂರು :  ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರು ಸಂಪರ್ಕದ ಸುರಕ್ಷತೆ ದೃಷ್ಟಿಯಿಂದ  ಎಲ್ಲಾ ಗೃಹ ಬಳಕೆ ಅನಿಲ ಸಿಲಿಂಡರ್ ಗ್ರಾಹಕರ ಮನೆಗಳಿಗೆ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಗೃಹ ಬಳಕೆ ಅನಿಲ ಸಿಲಿಂಡರ್ ಸಂಪರ್ಕವನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕಾಗಿರುತ್ತದೆ.

ಪಂಚವಾರ್ಷಿಕ ತಪಾಸಣೆಯನ್ನು ಗ್ರಾಹಕರ ಅನಿಲ ಸಿಲಿಂಡರ್ ಸಂಪರ್ಕದ ಸುರಕ್ಷತೆ ದೃಷ್ಠಿಯಿಂದ ಮಾಡಲಾಗುತ್ತದೆ. ಸುರಕ್ಷಿತ ಅನಿಲ ಸಿಲಿಂಡರ್ ಸಂಪರ್ಕಗಳಿಗೆ ಮಾತ್ರ ಸಿಲಿಂಡರ್ ಪೂರೈಕೆ ಮಾಡಲು ಭಾರತ್ ಗ್ಯಾಸ್ ಕಂಪನಿಯಲ್ಲಿ ನಿಯಮಾವಳಿ ಇರುವುದರಿಂದ ಎಲ್ಲಾ ಗೃಹ ಬಳಕೆ ಅನಿಲ ಸಿಲಿಂಡರ್ ಗ್ರಾಹಕರು ಸಹಕರಿಸಿ ಈ ಪಂಚವಾರ್ಷಿಕ ತಪಾಸಣೆ ಸೌಲಭ್ಯವನ್ನು ತಪ್ಪದೇ ಉಪಯೋಗಿಸಿಕೊಳ್ಳಲು ಸೂಚಿಸಲಾಗಿದೆ. ಸುರಕ್ಷಿತ ಅನಿಲ ಸಂಪರ್ಕಗಳಿಗೆ ಮಾತ್ರ ಅನಿಲ ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ. ಅಸುರಕ್ಷಿತ ಅನಿಲ ಸಿಲಿಂಡರ್ ಸಂಪರ್ಕಗಳಿಗೆ ಭಾರತ್ ಗ್ಯಾಸ್ ಕಂಪನಿ ನಿಯಮಾವಳಿ ಪ್ರಕಾರ ಸಿಲಿಂಡರ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ.

ಆದ್ದರಿಂದ ಕೆ.ಎಫ್.ಸಿ.ಎಸ್.ಸಿ. ಭಾರತ್ ಗ್ಯಾಸ್ ಏಜೆನ್ಸಿ ಕೊಪ್ಪಳ ವ್ಯಾಪ್ತಿಯ ಎಲ್ಲಾ ಗೃಹಬಳಕೆ ಅನಿಲ ಸಂಪರ್ಕಗಳನ್ನು ಪಂಚವಾರ್ಷಿಕ ತಪಾಸಣೆ ಕಾರ್ಯನಿರ್ವಹಿಸಲು ನುರಿತ ಸಿಬ್ಬಂದಿಯವರನ್ನು ಅಧಿಕೃತವಾಗಿ ನಿಯೋಜಿಸಲಾಗಿದೆ. ಈ ತಪಾಸಣೆ ಸಿಬ್ಬಂದಿಯವರು ಪ್ರತಿ ಗೃಹಬಳಕೆ ಅನಿಲ ಸಿಲಿಂಡರ್ ಸಂಪರ್ಕದ ಮನೆಗಳಿಗೆ ಭೇಟಿ ನೀಡಿ ಅನಿಲ ಸಿಲಿಂಡರ್ ಬಳಕೆಯ ಸುರಕ್ಷತಾ ನಿಯವiಗಳ ಮಾಹಿತಿಯನ್ನು ನೀಡುತ್ತಾರೆ. ನಿಮ್ಮ ಅನಿಲ ಸಿಲಿಂಡರ್ ಸಂಪರ್ಕವು ಸುರಕ್ಷಿತ ಅಥವಾ ಅಸುರಕ್ಷಿತ ಎಂಬುವುದರ ಬಗ್ಗೆ ಚೆಕ್‌ಲಿಸ್ಟ್ನಲ್ಲಿ ನಿಮಗೆ ವರದಿ ನೀಡುತ್ತಾರೆ. ಇದಕ್ಕೆ ಗ್ರಾಹಕರು ರೂ.150/- ಶುಲ್ಕ ನೀಡಿ ರಶೀದಿ ಪಡೆಯಬಹುದು. ಈ ಸಿಬ್ಬಂದಿಯವರು ಗ್ರಾಹಕರ ಸ್ಟವ್ ಮತ್ತು ರಬ್ಬರ್ ಟ್ಯೂಬ್ ಪರಿಶೀಲಿಸಿ, ಭಾರತ್ ಗ್ಯಾಸ್ ಕಂಪನಿಯಿಂದ ನಿಷೇಧಿಸಲ್ಪಟ್ಟಿರುವ ಹಸಿರು ಬಣ್ಣದ ರಬ್ಬರ್‌ಟ್ಯೂಬ್ ಅಥವಾ ಪ್ಲಾಸ್ಟಿಕ್ ಟ್ಯೂಬ್‌ಗಳಿದ್ದಲ್ಲಿ ಅವುಗಳನ್ನು ಬದಲಾಯಿಸಿ ಭಾರತ್ ಗ್ಯಾಸ್ ಕಂಪನಿಯಿಂದ ಶಿಫಾರಸ್ಸು ಮಾಡಿರುವ ಸುರಕ್ಷಾ ರಬ್ಬರ್ ಟ್ಯೂಬ್‌ಗಳನ್ನು ಅಳವಡಿಸಿ ಕೊಡುತ್ತಾರೆ. ಇದರ ಬೆಲೆ ರೂ 190/-ಇದ್ದು, ಗ್ರಾಹಕರು ಇದನ್ನು ಪಾವತಿಸಬೇಕಾಗಿರುತ್ತದೆ. ಗ್ರಾಹಕರ ಸ್ಟವ್ ದುರಸ್ಥಿ ಇದ್ದಲ್ಲಿ ಗ್ರಾಹಕರು ಒಪ್ಪಿಗೆ ಸೂಚಿಸಿದಲ್ಲಿ ಸ್ಟವ್ ದುರಸ್ಥಿ ಮಾಡಿಕೊಡುತ್ತಾರೆ. ಇದಕ್ಕೆ ಪ್ರತ್ಯೇಕ ಶುಲ್ಕ ನೀಡಬೇಕಾಗಿರುತ್ತದೆ.

ಈ ಬಗ್ಗೆ ತಪಾಸಣಾ ಸಿಬ್ಬಂದಿಯವರಿಗೆ ಗುರುತಿನ ಚೀಟಿಯನ್ನು ನೀಡಲಾಗಿರುತ್ತದೆ ಮತ್ತು ಆದೇಶದ ಪ್ರತಿಗಳನ್ನು ಸಹ ನೀಡಲಾಗಿರುತ್ತದೆ. ಗ್ರಾಹಕರಿಗೆ ಈ ಸಂಬಂಧ ಅನುಮಾನ ಅಥವಾ ದೂರುಗಳು ಇದ್ದಲ್ಲಿ ದೂರವಾಣಿ ಸಂ: 08539-2227770/2227779/221340 ಗೆ ಸಂಪರ್ಕಿಸಬಹುದು ಎಂದು ಕೆ.ಎಫ್.ಸಿ.ಎಸ್.ಸಿ ಭಾರತ್ ಗ್ಯಾಸ್‌ನ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...