alex Certify ಟಿ20 ಪಂದ್ಯದಲ್ಲಿ ಬರೋಬ್ಬರಿ 501 ರನ್: ಹೊಸ ವಿಶ್ವ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ಪಂದ್ಯದಲ್ಲಿ ಬರೋಬ್ಬರಿ 501 ರನ್: ಹೊಸ ವಿಶ್ವ ದಾಖಲೆ

ಟಿ20 ಪಂದ್ಯಗಳೆಂದರೆ ಅಲ್ಲಿ ರನ್ ಗಳ ಸುರಿಮಳೆಯೇ ಇರುತ್ತದೆ. ಈ ಚುಟುಕು ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ ಗಳದೇ ಅಬ್ಬರ ಜಾಸ್ತಿ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು, ಇದರ ಮಧ್ಯೆ ದಕ್ಷಿಣ ಆಫ್ರಿಕಾ ದೇಶಿಯ ಟಿ20 ಪಂದ್ಯದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.

ಹೌದು, ಮಂಗಳವಾರದಂದು ಪಾಚೆಫ್ ಸ್ಟ್ರೂಮ್ ನಲ್ಲಿ ನಡೆದ ಟೈಟಾನ್ಸ್ ಹಾಗೂ ನೈಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಬರೋಬ್ಬರಿ 501 ರನ್ ದಾಖಲಾಗಿದೆ. ಟೈಟಾನ್ಸ್ ತಂಡ ಮೂರು ವಿಕೆಟ್ ಗೆ 271 ರನ್ ಗಳಿಸಿದರೆ, ನೈಟ್ಸ್ ತಂಡ ಒಂಬತ್ತು ವಿಕೆಟ್ ಗೆ 230 ರನ್ ಗಳಿಸಿದೆ. ಉಭಯ ತಂಡಗಳು ಒಟ್ಟು 501 ರನ್ ಕಲೆ ಹಾಕಿವೆ.

ಈ ಹಿಂದೆ 2016 ರಲ್ಲಿ ನ್ಯೂಜಿಲ್ಯಾಂಡ್ ನ ಸೆಂಟ್ರಲ್ ಡಿಸ್ಟ್ರಿಕ್ಟ್ – ಒಟಾಗೋ ನಡುವಿನ ಪಂದ್ಯದಲ್ಲಿ 497 ರನ್ ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಡೇವಾಲ್ಡ್ ಬ್ರೆವೀಸ್ 52 ಎಸೆತದಲ್ಲಿ 13 ಸಿಕ್ಸರ್, 13 ಬೌಂಡರಿಗಳೊಂದಿಗೆ 150 ರನ್ ಗಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...