alex Certify ಆ ಒಂದು ಸಣ್ಣ ತಪ್ಪು ಕರಗಿಸಿತು ಸಂಪತ್ತು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆ ಒಂದು ಸಣ್ಣ ತಪ್ಪು ಕರಗಿಸಿತು ಸಂಪತ್ತು….!

ಇತ್ತೀಚಿಗೆ ಕ್ರಿಪ್ಟೋ ಕರೆನ್ಸಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವುದು ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗಬಹುದು ಆದರೆ ಅಷ್ಟೇ ರಿಸ್ಕ್ ಇರಲಿದೆ.

ಕ್ರಿಪ್ಟೋ ಮೊಬೈಲ್ ಮತ್ತು ಇಂಟರ್ನೆಟ್ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುವ ಕಾರಣದಿಂದಾಗಿ ಬಹಳಷ್ಟು ಆಘಾತ ಉಂಟುಮಾಡಲೂಬಹುದು.

ಅಬ್ಬಾ….! ಮದುವೆ ಉಡುಪಿಗೆ ಈಕೆ ಖರ್ಚು ಮಾಡಿದ್ದು ಬರೋಬ್ಬರಿ 2.5 ಲಕ್ಷ ರೂಪಾಯಿ

ಡೊಮೆನಿಕ್ ಐಕೋವೊನ್ ಎಂಬಾತ $ 6,50,000 (4.97 ಕೋಟಿ ರೂ.) ಕಳೆದುಕೊಂಡಿದ್ದು, ಇದಕ್ಕೆ ಸಣ್ಣ ಒಂದು ಮಿಸ್ಟೇಕ್ ಎಂಬುದು ನಂತರ ಅನುಭವಕ್ಕೆ ಬಂದಿದೆ.

ಸಣ್ಣ ತಪ್ಪಿನಿಂದಾಗಿ ಕೆಲವೇ ಸೆಕೆಂಡುಗಳಲ್ಲಿ ಕ್ರಿಪ್ಟೋ ಸಂಪತ್ತು ಹೇಗೆ ಕರಗಿತೆಂದು ಅವರು ಹೇಳಿಕೊಂಡಿದ್ದು, ತಮ್ಮ ಎಲ್ಲಾ ಬೆಲೆಬಾಳುವ ಎನ್‌ಎಫ್‌ಟಿಗಳನ್ನು ಡಿಜಿಟಲ್ ವ್ಯಾಲೆಟ್‌ನಲ್ಲಿ ಇರಿಸಿಕೊಂಡಿದ್ದರು, ಐಕ್ಲೌಡ್ ಹ್ಯಾಕ್ ಅನ್ನು ಬಳಸಿಕೊಂಡು ಸ್ಕ್ಯಾಮರ್‌ಗಳು ವ್ಯಾಲೆಟ್‌ನಲ್ಲಿ ಸಂಗ್ರಹವಾಗಿರುವ ಅವರ ಡಿಜಿಟಲ್ ಸಂಪತ್ತು ದೋಚಿದ್ದಾರೆ.

ಡೊಮೆನಿಕ್ ತನ್ನ ಕಾಲರ್ ಐಡಿಯಲ್ಲಿ ‘ಆಪಲ್’ ಎಂದು ಗುರುತಿಸಲಾದ ಸಂಖ್ಯೆಯಿಂದ ಫೋನ್ ಕರೆ ಸ್ವೀಕರಿಸಿದ್ದರು. ಆಪಲ್‌ನಿಂದ ಕರೆ ಬಂದಿದೆ ಎಂದು ಮತ್ತೆ ತಿರುಗಿ ಆ ನಂಬರ್‌ಗೆ ಕರೆ ಮಾಡಿದಾಗ, ಫೋನ್‌ಗೆ ಕಳುಹಿಸಲಾದ ಕೋಡ್ ಕೇಳಿದರು. ಮತ್ತು ಕೆಲವೇ ಸೆಕೆಂಡುಗಳ ನಂತರದಲ್ಲಿ ಸಂಪೂರ್ಣ ಡಿಜಿಟಲ್ ವ್ಯಾಲೆಟ್ ನಾಶವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...