alex Certify ಭತ್ತ ಕೊಯ್ಲು ವೇಳೆಯಲ್ಲೇ ಬೆಚ್ಚಿಬಿದ್ದ ಚಾಲಕ, ದಿಢೀರ್ ಎದುರಾದ ಮೊಸಳೆ ಕಂಡು ಕಾಲ್ಕಿತ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭತ್ತ ಕೊಯ್ಲು ವೇಳೆಯಲ್ಲೇ ಬೆಚ್ಚಿಬಿದ್ದ ಚಾಲಕ, ದಿಢೀರ್ ಎದುರಾದ ಮೊಸಳೆ ಕಂಡು ಕಾಲ್ಕಿತ್ತ

ರಾಯಚೂರು: ಭತ್ತದ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷವಾದ ಘಟನೆ ಸಿಂಧನೂರು ತಾಲೂಕಿನ ದಡೆಸೂಗುರು ಗ್ರಾಮದ ಬಳಿ ನಡೆದಿದೆ.

ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಇರುವ ರೈತರೊಬ್ಬರ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುವಾಗ ಮೊಸಳೆ ಕಾಣಿಸಿಕೊಂಡಿದೆ. ಯಂತ್ರದ ಮೂಲಕ ಭತ್ತ ಕೊಯ್ಲು ಮಾಡುತ್ತಿದ್ದ ವೇಳೆ ಒಮ್ಮೆಲೆ ಮೊಸಳೆ ಬಾಯಿತೆರೆದು ದಾಳಿಗೆ ಮುಂದಾಗಿದೆ. ಈ ವೇಳೆ ಭಯಗೊಂಡ ಭತ್ತ ಕೊಯ್ಲು ಯಂತ್ರದ ಚಾಲಕ ಅಲ್ಲಿಂದ ಓಡಿ ರೈತರಿಗೆ ಮಾಹಿತಿ ನೀಡಿದ್ದಾನೆ. ನಂತರ ಜನರೆಲ್ಲ ಸೇರಿ ಮೊಸಳೆಯನ್ನು ತುಂಗಭದ್ರಾ ನದಿ ಕಡೆಗೆ ಕಳಿಸಿದ್ದಾರೆ. ನಂತರ ಕೊಯ್ಲು ಮುಂದುವರೆಸಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...