alex Certify ದಂಗಾಗಿಸುವಂತಿದೆ ಕ್ರಿಸ್ಟಿಯಾನೋ ರೊನಾಲ್ಡೊ ವಾರಕ್ಕೆ ಪಡೆಯುವ ‘ವೇತನ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಕ್ರಿಸ್ಟಿಯಾನೋ ರೊನಾಲ್ಡೊ ವಾರಕ್ಕೆ ಪಡೆಯುವ ‘ವೇತನ’

ಪೋರ್ಚುಗಲ್ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ವಿಶ್ವದ ಕ್ರೀಡಾಪಟುಗಳ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ರೊನಾಲ್ಡೊ ಇದೀಗ ಹೊಸ ಫುಟ್ಬಾಲ್ ಕ್ಲಬ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಅವರು ಪಡೆಯುವ ವೇತನ ದಂಗಾಗಿಸುವಂತಿದೆ.

ಈ ಮೊದಲು ಜುವೆಂಟಸ್ ಕ್ಲಬ್ ಪರ ಆಟವಾಡುತ್ತಿದ್ದ 36 ವರ್ಷದ ಕ್ರಿಸ್ಟಿಯಾನೋ ರೊನಾಲ್ಡೊ ಇದೀಗ ಯುರೋಪ್ ನ ಬಲಿಷ್ಠ ಫುಟ್ ಬಾಲ್ ಕ್ಲಬ್ ಗಳ ಪೈಕಿ ಒಂದಾದ ಮ್ಯಾಂಚೆಸ್ಟರ್ ಯುನೈಟೆಡ್ ಜೊತೆ ಹೊಸ ಒಡಂಬಡಿಕೆ ಮಾಡಿಕೊಂಡಿದ್ದಾರೆ.

ರೊನಾಲ್ಡೋ ಕೋಲಾ ಬಾಟಲಿ ವಿವಾದಕ್ಕೆ ಹೊಸ ಅರ್ಥ ನೀಡಿದ ಫೆವಿಕಾಲ್..!

ಎರಡು ವರ್ಷಗಳ ಕಾಲದ ಒಪ್ಪಂದ ಇದಾಗಿದ್ದು, ಕ್ರಿಸ್ಟಿಯಾನೋ ರೊನಾಲ್ಡೊ ವಾರಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಅತಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ಮುಂದುವರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...