alex Certify ರೊನಾಲ್ಡೋ ಕೋಲಾ ಬಾಟಲಿ ವಿವಾದಕ್ಕೆ ಹೊಸ ಅರ್ಥ ನೀಡಿದ ಫೆವಿಕಾಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೊನಾಲ್ಡೋ ಕೋಲಾ ಬಾಟಲಿ ವಿವಾದಕ್ಕೆ ಹೊಸ ಅರ್ಥ ನೀಡಿದ ಫೆವಿಕಾಲ್..!

ಖ್ಯಾತ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಸುದ್ದಿಗೋಷ್ಠಿಯಲ್ಲಿ ಕೋಲಾ ಬಾಟಲಿಯನ್ನ ಸರಿಸಿದ ವಿಚಾರ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ. ಯುರೋ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ರೊನಾಲ್ಡೋ ಮೇಜಿನ ಮೇಲಿದ್ದ ಎರಡು ಕೋಕ್​ ಬಾಟಲಿಯನ್ನ ಸರಿಸಿದ ಬಳಿಕ ಕೋಕ್​ ಮಾರುಕಟ್ಟೆಗೆ ನಾಲ್ಕು ಬಿಲಿಯನ್​ ನಷ್ಟ ಕೂಡ ಉಂಟಾಗಿದೆ..!

ಆದರೆ ಸೋಶಿಯಲ್​ ಮೀಡಿಯಾದಲ್ಲಿ ಮಾತ್ರ ಈ ವಿಡಿಯೋವನ್ನ ತರಹೇವಾರಿ ರೀತಿಯಲ್ಲಿ ಟ್ರೋಲ್​ ಮಾಡಲಾಗ್ತಿದೆ. ಈ ಟ್ರೋಲ್​​ ರೇಸ್​ನಲ್ಲಿ ಫೇವಿಕಾಲ್​ ಕಂಪನಿ ಕೂಡ ಸೇರಿದ್ದು ಟ್ವಿಟರ್​ನಲ್ಲಿ ಪೋಸ್ಟ್​ ಶೇರ್​ ಮಾಡಿದೆ.

ಈ ಪೋಸ್ಟ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಬಳಕೆ ಮಾಡಲಾದ ಖುರ್ಚಿ, ಮೇಜು, ಮೈಕ್​ ಎಲ್ಲಾ ಇದೆ. ಆದರೆ ರೊನಾಲ್ಡೋ ಕ್ರಿಸ್ಟಿಯಾನೋ ಇಲ್ಲ. ಹಾಗೂ ಕೋಲಾ ಜಾಗದಲ್ಲಿ ಫೆವಿಕಾಲ್​ ಬಾಟಲಿಯನ್ನ ಇಡಲಾಗಿದೆ. ಈ ಫೋಟೋಗೆ ಬಾಟಲಿಯನ್ನ ಅಲ್ಲಾಡಿಸಲು ಸಾಧ್ಯವಿಲ್ಲ. ಹಾಗೂ ಮೌಲ್ಯವೂ ಕಡಿಮೆಯಾಗೋದಿಲ್ಲ ಎಂದು ಶೀರ್ಷಿಕೆ ನೀಡಲಾಗಿದೆ.ಈ ಟ್ವೀಟ್​​ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...