alex Certify 35 ವರ್ಷಗಳ ಹುಡುಕಾಟದ ನಂತರ ಖಾಕಿಗೆ ಸಿಕ್ಕ ಕ್ಯಾಸೆಟ್ ಕದ್ದಿದ್ದ ಕಳ್ಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

35 ವರ್ಷಗಳ ಹುಡುಕಾಟದ ನಂತರ ಖಾಕಿಗೆ ಸಿಕ್ಕ ಕ್ಯಾಸೆಟ್ ಕದ್ದಿದ್ದ ಕಳ್ಳ

ಸತತ 35 ವರ್ಷಗಳ ಹುಟುಕಾಟದ ನಂತರ ಕ್ಯಾಸೆಟ್ ಗಳನ್ನು ಕದ್ದಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಗ್ನೇಯ ದೆಹಲಿಯ ಕಲ್ಕಾಜಿಯಲ್ಲಿ ಕಿಯೋಸ್ಕ್ ನಿಂದ 300 ಕ್ಯಾಸೆಟ್‌ಗಳನ್ನು ಕದ್ದ ಆರೋಪದ ಮೇಲೆ 35 ವರ್ಷಗಳ ನಂತರ ಘೋಷಿತ ಅಪರಾಧಿ 60 ವರ್ಷದ ವ್ಯಕ್ತಿ ಪವನ್ ಕುಮಾರ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಗ್ನೇಯ ದೆಹಲಿಯ ಕಲ್ಕಾಜಿಯಲ್ಲಿ 1989 ರಲ್ಲಿ ಕಿಯೋಸ್ಕ್ ನಿಂದ ಆಡಿಯೋ ಕ್ಯಾಸೆಟ್‌ಗಳ ಕಳ್ಳತನದ ಘಟನೆ ವರದಿಯಾತ್ತು. ಈ ಸಂಬಂಧ ಕಲ್ಕಾಜಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿ ಪವನ್ ಕುಮಾರ್ ಪೊಲೀಸರಿಗೆ ಬೇಕಾಗಿದ್ದು ಆತನನ್ನು 1997ರಲ್ಲಿ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲಾಗಿತ್ತು.

ಈ ಘೋಷಿತ ಅಪರಾಧಿಯನ್ನು ಪತ್ತೆಹಚ್ಚಲು ವಿವಿಧ ಜಿಲ್ಲೆಗಳಲ್ಲಿ ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಯಿತು. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಈತ ಇದೀಗ ಸಿಕ್ಕಿಬಿದ್ದಿದ್ದು 60 ವರ್ಷದ ಪವನ್ ಕುಮಾರ್ ನನ್ನು ಬಂಧಿಸಲಾಗಿದೆ. ಆತ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

1997 ರಲ್ಲಿ ಕಿಯೋಸ್ಕ್ ಮಾಲೀಕರು ದಾಖಲಿಸಿದ ಎಫ್‌ಐಆರ್‌ನಲ್ಲಿ ಟಿ-ಸೀರೀಸ್ ಮತ್ತು ವಿಹೆಚ್1 ಸೇರಿದಂತೆ ವಿವಿಧ ಬ್ರಾಂಡ್‌ಗಳ ಸುಮಾರು 300 ಕ್ಯಾಸೆಟ್‌ಗಳನ್ನು ಇಬ್ಬರು ವ್ಯಕ್ತಿಗಳು ಅವರ ಕಿಯೋಸ್ಕ್ ನಿಂದ ಕದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರು. ಪವನ್ ಕುಮಾರ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ನಂತರ ಪವನ್ ಕುಮಾರ್ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ನಾಪತ್ತೆಯಾಗಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...