alex Certify ಮತ್ತೆ ಸಸ್ಪೆನ್ಸ್ ಕಾಯ್ದುಕೊಂಡ ಧೋನಿ…..! ಹೆಚ್ಚಾಯ್ತು CSK ಅಭಿಮಾನಿಗಳ ಟೆನ್ಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಸಸ್ಪೆನ್ಸ್ ಕಾಯ್ದುಕೊಂಡ ಧೋನಿ…..! ಹೆಚ್ಚಾಯ್ತು CSK ಅಭಿಮಾನಿಗಳ ಟೆನ್ಷನ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್  ಅಭಿಮಾನಿಗಳ ಟೆನ್ಷನ್ ಜಾಸ್ತಿ ಮಾಡಿದ್ದಾರೆ. ಐಪಿಎಲ್ 2021 ರ 53 ನೇ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಧೋನಿ, ಮುಂದಿನ ಋತುವಿನಲ್ಲೂ ಸಿಎಸ್ಕೆ ಗಾಗಿ ಆಡಲು ಬಯಸುತ್ತೇನೆ. ಆದರೆ 2 ಹೊಸ ತಂಡಗಳು ಬಂದ ನಂತರ ಏನಾಗಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಐಪಿಎಲ್ 2022 ರಿಂದ, 8 ತಂಡಗಳ ಬದಲು 10 ತಂಡಗಳು ಮೈದಾನಕ್ಕಿಳಿಯಲಿವೆ. ಈ ತಿಂಗಳು 2 ಹೊಸ ತಂಡಗಳ ಹರಾಜು ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಧೋನಿ, ನನ್ನನ್ನು ಮುಂದಿನ ಋತುವಿನಲ್ಲೂ ಹಳದಿ ಜರ್ಸಿಯಲ್ಲಿ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ಆದ್ರೆ ಇದ್ರ ಬಗ್ಗೆ ಇನ್ನೂ ಯಾರಿಗೂ ತಿಳಿದಿಲ್ಲ. ಸಾಕಷ್ಟು ಅನಿಶ್ಚಿತತೆಗಳಿದ್ದು, 2 ಹೊಸ ತಂಡ ಐಪಿಎಲ್ ಗೆ ಸೇರಲಿದೆ ಎಂದು ಧೋನಿ ಹೇಳಿದ್ದಾರೆ.

ನಿತ್ಯ 74 ರೂ. ಉಳಿಸಿ ನಿವೃತ್ತಿ ಬಳಿಕ 27,500 ರೂ. ಪಿಂಚಣಿ ಪಡೆಯಿರಿ

ಎರಡು ದಿನಗಳ ಹಿಂದೆ ಈ ಬಗ್ಗೆ ಮಾತನಾಡಿದ್ದ ಧೋನಿ, ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸುವುದಾಗಿ ಹೇಳಿದ್ದರು. 2019 ರಿಂದ ಧೋನಿ ಚೆನ್ನೈನಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ. ಧೋನಿ ನಾಯಕತ್ವದಲ್ಲಿ ಸಿಎಸ್ಕೆ 3 ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಈ ಋತುವಿನ 13 ಪಂದ್ಯಗಳಲ್ಲಿ 9 ಪಂದ್ಯ ಗೆದ್ದ ತಂಡ ಪ್ಲೇಆಫ್ ನಲ್ಲಿ ಸ್ಥಾನ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...