alex Certify ಆಪಲ್​ ಕ್ರೇಜ್…..​! ಭಾರತದಲ್ಲಿ ಐಫೋನ್​ 14 ಪ್ರೋ ನ ಮೊದಲ ಮಾಲೀಕನೆನಿಸಿಕೊಳ್ಳಲು ದುಬೈಗೆ ಹಾರಿದ ಕೇರಳ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪಲ್​ ಕ್ರೇಜ್…..​! ಭಾರತದಲ್ಲಿ ಐಫೋನ್​ 14 ಪ್ರೋ ನ ಮೊದಲ ಮಾಲೀಕನೆನಿಸಿಕೊಳ್ಳಲು ದುಬೈಗೆ ಹಾರಿದ ಕೇರಳ ಉದ್ಯಮಿ

ಮೊಬೈಲ್​ ಕ್ರೇಜ್​ ಸಾಮಾನ್ಯವಾದದ್ದೇನಲ್ಲ. ಮಾರುಕಟ್ಟೆಗೆ ಹೊಸ ಮೊಬೈಲ್​ ಪ್ರವೇಶವಾಗುತ್ತಿದ್ದಂತೆ ಯುವಜನತೆ ಅದರತ್ತ ಆಕರ್ಷಿತರಾಗುವುದು ಸಾಮಾನ್ಯವಾಗಿದೆ.

ಸದ್ಯ ಆ್ಯಪಲ್​ ಐಫೋನ್​ 14 ಪ್ರೋ ಕ್ರೇಜ್​ ಹೆಚ್ಚಿದೆ. ಪ್ರತಿ ಬಾರಿ ಆಪಲ್​ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದಾಗ ಪ್ರಪಂಚದಾದ್ಯಂತದ ಅಭಿಮಾನಿಗಳು ತಮ್ಮ ಉತ್ಸಾಹವನ್ನು ತೋರುತ್ತಾರೆ.

ಅಂತಹ ಕಟ್ಟಾ ಅಭಿಮಾನಿ ಕೊಚ್ಚಿ ಮೂಲದ ಉದ್ಯಮಿ ಐಫೋನ್​ 14 ಪ್ರೋನ ನ ಮೊದಲ ಮಾಲೀಕರಲ್ಲಿ ಒಬ್ಬರಾಗಲು ದುಬೈಗೆ ಹಾರಿದ್ದಾರೆ.

ಧೀರಜ್​ ಪಲ್ಲಿಯಿಲ್​ ಅವರು ದುಬೈನ ಮಿಡಿರ್ಫ್​ ಸೆಂಟರ್​ನಲ್ಲಿರುವ ಪ್ರೀಮಿಯಂ ಮಾರಾಟಗಾರರಿಂದ ಆ್ಯಪಲ್​ ಐಫೋನ್​ 14 ಪ್ರೊವನ್ನು ಶುಕ್ರವಾರ (ಸೆಪ್ಟೆಂಬರ್​ 16) ಬೆಳಿಗ್ಗೆ 7 ಗಂಟೆಗೆ ಖರೀದಿಸಿದ್ದಾರೆ.

ಅದೇ ದಿನಾಂಕದಂದು ಭಾರತದಲ್ಲಿ ಬಿಡುಗಡೆಯಾಗುವ ಗಂಟೆಗಳ ಮೊದಲು ಖರೀದಿಸಿದ್ದು, ಈ ಮೂಲಕ ಆ್ಯಪಲ್​ ಐಫೋನ್​ 14 ಪ್ರೋನ ಮೊದಲ ಗ್ರಾಹಕ ಎಂದೆನಿಸಿಕೊಳ್ಳಬೇಕೆಂಬ ಗುರಿಯನ್ನು ಈಡೇರಿಸಿಕೊಂಡಿದ್ದಾರೆ. ಪಲ್ಲಿಯಿಲ್​ ಅವರು ಡೇರ್​ ಪಿಕ್ಚರ್ಸ್​ ಎಂಬ ಡಿಜಿಟಲ್​ ಸಲಹಾ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಧೀರಜ್​ ಅವರು ಐಫೋನ್​ 14 ಪ್ರೊ ಫೋನ್​ ಗಾಗಿ 1.29 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಜತೆಗೆ ಟಿಕೆಟ್​ ದರ ಮತ್ತು ವೀಸಾ ಶುಲ್ಕಕ್ಕೆ 40 ಸಾವಿರ ರೂ. ವೆಚ್ಚ ಮಾಡಿದ್ದಾರೆ.

ಪಲ್ಲಿಯಿಲ್​ ಅವರು ಐಫೋನ್​ ಮಳಿಗೆಯಿಂದಲೇ ಮೊಬೈಲ್​ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ.

ಐಫೋನ್‌​ 14 ಪ್ರೊ ಭಾರತದಲ್ಲಿ ಮಾರಾಟ ಪ್ರಾರಂಭವಾಗುವ ಗಂಟೆಗಳ ಮೊದಲು ನಾನು ದುಬೈನಲ್ಲಿ ಖರೀದಿಸಲು ನಿರ್ಧರಿಸಿದೆ. ಅಂಗಡಿಯ ಹೊರಗೆ ಸಾವಿರಾರು ಜನರು ಕಾಯುತ್ತಿರುವಾಗ ಫೋನ್​ನ ಮೊದಲ ಗ್ರಾಹಕರಾಗಿ ಖರೀದಿಸಿದಾಗ ಅದು ವಿಶೇಷ ಅನುಭವ ನೀಡುತ್ತದೆ ಎಂದು ಪಲ್ಲಿಯಿಲ್​ ಹೇಳಿದ್ದಾರೆ.

ಈ ಹಿಂದೆಯೂ ಸಹ, ಭಾರತದಲ್ಲಿ ತಮ್ಮ ಬಿಡುಗಡೆಯ ದಿನಾಂಕಕ್ಕಿಂತ ಮುಂಚಿತವಾಗಿ ಐಫೋನ್​ ಮಾದರಿ ಖರೀದಿಸಲು ಪಲ್ಲಿಯಿಲ್​ ದುಬೈಗೆ ಹಾರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...