alex Certify 12 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ಕುರಿತಂತೆ ಕೇಂದ್ರದಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

12 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ಕುರಿತಂತೆ ಕೇಂದ್ರದಿಂದ ಮಹತ್ವದ ಮಾಹಿತಿ

12 ರಿಂದ 18 ವರ್ಷ ಪ್ರಾಯದ ಮಕ್ಕಳಿಗೆ ಜುಲೈ ಅಂತ್ಯ ಇಲ್ಲವೇ ಆಗಸ್ಟ್​ ತಿಂಗಳ ಒಳಗಾಗಿ ಕೊರೊನಾ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಮಾಹಿತಿ ನೀಡಿದೆ.

ಜೈಡಸ್​ ಕ್ಯಾಡಿಲಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ಭಾಗಶಃ ಮುಕ್ತಾಯವಾಗಿದೆ. ಹೀಗಾಗಿ ಜುಲೈ ಅಂತ್ಯ ಇಲ್ಲವೇ ಆಗಸ್ಟ್​ ತಿಂಗಳೊಳಗಾಗಿ ಈ ಲಸಿಕೆಯನ್ನ ಮಕ್ಕಳಿಗೆ ನೀಡಲಾಗುತ್ತದೆ ಎಂದು ಕೋವಿಡ್​ 19 ಕಾರ್ಯ ಸಮೂಹದ ಅಧ್ಯಕ್ಷ ಡಾ. ಎನ್​ ಕೆ ಅರೋರಾ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಲಭ್ಯವಿದೆ.

ದೇಶದಲ್ಲಿ ಕೊರೊನಾ ಮೂರನೇ ಅಲೆಯು ತಡವಾಗಿ ಆರಂಭವಾಗಬಹುದು ಎಂಬ ಐಸಿಎಂಆರ್​ ಅಧ್ಯಯನದ ವಿಚಾರವಾಗಿಯೂ ಮಾತನಾಡಿದ ಅರೋರಾ, 6ರಿಂದ 8 ತಿಂಗಳ ಒಳಗಾಗಿ ದೇಶದಲ್ಲಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವ ಸಲುವಾಗಿ 1 ಕೋಟಿಗೂ ಅಧಿಕ ಮಂದಿಗೆ ಪ್ರತಿನಿತ್ಯ ಲಸಿಕೆಯನ್ನ ನೀಡೋದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ರು. ಅಲ್ಲದೇ ಕೊರೊನಾ ಲಸಿಕೆ ಕುರಿತಾದ ವಿವಿಧ ತಪ್ಪು ಮಾಹಿತಿಗಳನ್ನ ಅಲ್ಲಗೆಳೆದ ಅರೋರಾ, ಕೊರೊನಾ ಲಸಿಕೆಗಳು 95 ರಿಂದ 96 ಪ್ರತಿಶತ ಸುರಕ್ಷಿತವಾಗಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...