alex Certify BIG NEWS: ‘ಕೋವಿಡ್’ ಟೆಸ್ಟ್ ಪಾಸಿಟಿವ್ ಆದರೂ ಟಿ20 ವಿಶ್ವಕಪ್ ನಲ್ಲಿ ಆಡಲು ಅವಕಾಶ; ಐಸಿಸಿ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಕೋವಿಡ್’ ಟೆಸ್ಟ್ ಪಾಸಿಟಿವ್ ಆದರೂ ಟಿ20 ವಿಶ್ವಕಪ್ ನಲ್ಲಿ ಆಡಲು ಅವಕಾಶ; ಐಸಿಸಿ ಮಹತ್ವದ ನಿರ್ಧಾರ

ಟಿ ಟ್ವೆಂಟಿ ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದ್ದು, ಇದರ ಮಧ್ಯೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಹತ್ವದ ತೀರ್ಮಾನ ಕೈಗೊಂಡಿದೆ. ಪಂದ್ಯಾವಳಿ ಸಂದರ್ಭದಲ್ಲಿ ಆಟಗಾರರು ಕೋವಿಡ್ ಪಾಸಿಟಿವ್ ಆದರೂ ಅವರಿಗೆ ಆಟವಾಡಲು ಅವಕಾಶ ನೀಡಲಾಗುತ್ತದೆ.

ಕೋವಿಡ್ ಪಾಸಿಟಿವ್ ಆದ ಆಟಗಾರರು ತಮ್ಮ ತಂಡದ ವೈದ್ಯರ ಸಲಹೆ ಮೇರೆಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಅವರಿಗೆ ಯಾವುದೇ ಪ್ರತ್ಯೇಕ ಪರೀಕ್ಷೆ ಅಥವಾ ಐಸೋಲೇಶನ್ ನಿಯಮಗಳು ಅನ್ವಯಿಸುವುದಿಲ್ಲ.

ತಂಡದ ವೈದ್ಯರ ತೀರ್ಮಾನವೇ ಅಂತಿಮವಾಗಿದ್ದು, ಪಂದ್ಯಾವಳಿಯಲ್ಲಿ ಆಟವಾಡಲು ಆಟಗಾರ ಸಮರ್ಥನಿದ್ದಾನೆ ಎಂದು ಅವರು ತೀರ್ಮಾನಿಸಿದರೆ ಅದಕ್ಕೆ ಅವಕಾಶ ನೀಡಲಾಗುತ್ತದೆ.

ಈ ಹಿಂದಿನ ಪಂದ್ಯಾವಳಿಗಳಲ್ಲಿ ಆಟಗಾರರು ಕೋವಿಡ್ ಪಾಸಿಟಿವ್ ಆದ ಸಂದರ್ಭದಲ್ಲಿ, ಅವರನ್ನು ತಂಡದಿಂದ ಪ್ರತ್ಯೇಕಿಸಲಾಗುತ್ತಿತ್ತು. ಅಲ್ಲದೆ ಐಸೊಲೇಶನ್ ನಲ್ಲಿ ಇರಿಸಿ ಸಂಪೂರ್ಣವಾಗಿ ಗುಣಮುಖರಾದ ಬಳಿಕವೇ ಆಟವಾಡಲು ಅವಕಾಶ ನೀಡಲಾಗುತ್ತಿತ್ತು. ಇದೀಗ ಐಸಿಸಿ ಈ ನಿಯಮವನ್ನು ಬದಲಾಯಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...