alex Certify ವರನಿಗೆ ಕೊರೋನಾ, ಪಿಪಿಇ ಕಿಟ್ ಧರಿಸಿ ಬಂದ ವಧು – ಕೋವಿಡ್ ಆಸ್ಪತ್ರೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರನಿಗೆ ಕೊರೋನಾ, ಪಿಪಿಇ ಕಿಟ್ ಧರಿಸಿ ಬಂದ ವಧು – ಕೋವಿಡ್ ಆಸ್ಪತ್ರೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಕೇರಳದ ಅಲಪ್ಪುಜ ಜಿಲ್ಲೆಯ ಶರತ್ ಮತ್ತು ಅಭಿರಾಮಿ ಅವರು ತಿರುವನಂತಪುರಂನ ಕೋವಿಡ್ ಆಸ್ಪತ್ರೆಯಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಿರುವನಂತಪುರದ ಕೋವಿಡ್ ಆಸ್ಪತ್ರೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಸಮ್ಮುಖದಲ್ಲೇ ಶರತ್ ಮತ್ತು ಅಭಿರಾಮಿ ಮದುವೆ ನೆರವೇರಿದೆ. ಇವರ ಮದುವೆ ಎರಡು ವರ್ಷಗಳ ಹಿಂದೆ ನಿಶ್ಚಯವಾಗಿತ್ತು. ಕೋವಿಡ್ ಕಾರಣದಿಂದ ವಿದೇಶದಲ್ಲಿ ಕೆಲಸದಲ್ಲಿದ್ದ ಶರತ್ ಭಾರತಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಅವರು ಬಂದ ನಂತರ ಭಾನುವಾರ ಮದುವೆಗೆ ದಿನಾಂಕ ಗೊತ್ತು ಮಾಡಲಾಗಿತ್ತು.

ಈ ನಡುವೆ ಶರತ್ ಮತ್ತು ಅವರ ತಾಯಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿಗದಿಯಾಗಿದ್ದ ಮದುವೆ ನಿಲ್ಲಿಸಲು ಬಯಸದ ಕುಟುಂಬದವರು ಆಸ್ಪತ್ರೆಯಲ್ಲಿಯೇ ಮದುವೆ ಮಾಡಲು ನಿರ್ಧರಿಸಿದ್ದಾರೆ. ಅಭಿರಾಮಿ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಬಂದಿದ್ದು, ಅಲ್ಲೇ ಹಾರ ಬದಲಿಸಿಕೊಂಡು ಮದುವೆಯಾಗಿದ್ದಾರೆ. ಆಸ್ಪತ್ರೆಯ ಕೆಲವು ಸಿಬ್ಬಂದಿ ಮತ್ತು ಶರತ್ ತಾಯಿ ಈ ಸಂದರ್ಭದಲ್ಲಿದ್ದರು. ಮದುವೆಯಾದ ಕೆಲ ಸಮಯದಲ್ಲೇ ಅಭಿರಾಮಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...