alex Certify ರಾಜಸ್ತಾನದಲ್ಲಿ‌ 21 ಹೊಸ ಪ್ರಕರಣ, 43 ಕ್ಕೇರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಸ್ತಾನದಲ್ಲಿ‌ 21 ಹೊಸ ಪ್ರಕರಣ, 43 ಕ್ಕೇರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ

ರಾಜಸ್ತಾನದಲ್ಲಿ ಒಮಿಕ್ರಾನ್ ಭೀತಿ ಹೆಚ್ಚುತ್ತಲೆ ಇದೆ‌‌. ರಾಜಸ್ತಾನದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 21 ಒಮಿಕ್ರಾನ್ ಕೇಸ್ ಗಳು ಪಾಸಿಟಿವ್ ಬಂದಿದ್ದು, ಈ ಮೂಲಕ ರಾಜ್ಯದ ಒಮಿಕ್ರಾನ್ ಸೋಂಕಿತರ ಸಂಖ್ಯೆ 43ಕ್ಕೇರಿದೆ. ಜೈಪುರದ 11, ಅಜ್ಮೀರದ 6, ಉದಯಪುರದ 3 ಹಾಗೂ ಮಹಾರಾಷ್ಟ್ರ 1 ಸೇರಿ ಒಟ್ಟು 21 ಒಮಿಕ್ರಾನ್ ಕೇಸ್ ಗಳು ಪತ್ತೆಯಾಗಿವೆ.

BIG BREAKING: ನಾಳೆ ಬೆಳಗ್ಗೆಯೇ ಹೈವೋಲ್ಟೇಜ್ ಮೀಟಿಂಗ್, ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ…?

ಈ 21 ಸೋಂಕಿತರಲ್ಲಿ ಐವರಿಗೆ ವಿದೇಶ ಪ್ರಯಾಣದ ಇತಿಹಾಸವಿದ್ದು, ಮೂವರು ಇವರ ಸಂಪರ್ಕದಲ್ಲಿದ್ದವರು. ಇನ್ನುಳಿದ ಮೂವರು ಈ ಮೊದಲೆ ಒಮಿಕ್ರಾನ್ ಪಾಸಿಟಿವ್ ಬಂದಿದ್ದವರ ಸಂಪರ್ಕದಲ್ಲಿದ್ದವರು‌. ರಾಜ್ಯದ ಒಟ್ಟು 43 ಪ್ರಕರಣಗಳಲ್ಲಿ 28 ಜೈಪುರದಲ್ಲೆ ಪತ್ತೆಯಾಗಿರುವುದು ಆತಂಕಕ್ಕೀಡು ಮಾಡಿದೆ. ಈ ಹಿಂದೆ 27 ವರ್ಷದ ಕೀನ್ಯಾದ ಮಹಿಳೆಯೊಬ್ಬರಲ್ಲಿ ಒಮಿಕ್ರಾನ್ ಪತ್ತೆಯಾಗಿತ್ತು, ಆನಂತರ ಒಂದೇ ಕುಟುಂಬದ ಒಂಭತ್ತು ಜನರಿಗೆ ಒಮಿಕ್ರಾನ್ ವಕ್ಕರಿಸಿತ್ತು. ಸಧ್ಯ ಈ ಕುಟುಂಬ ಹಾಗೂ ಕೀನ್ಯಾದ ಮಹಿಳೆ ಸೇರಿ ಹತ್ತು ಜನರ ವರದಿ ನೆಗೆಟಿವ್ ಬಂದಿದ್ದು ಅವರನ್ನ ಮನೆಗೆ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...