alex Certify ಹೊಸ ಮನೆಗೆ ಕಾಲಿಟ್ಟ ದಂಪತಿಗೆ ಆರಂಭದಲ್ಲೇ ಗಾಬರಿ ಮೂಡಿಸಿದ ವಿಚಿತ್ರ ವಸ್ತುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಮನೆಗೆ ಕಾಲಿಟ್ಟ ದಂಪತಿಗೆ ಆರಂಭದಲ್ಲೇ ಗಾಬರಿ ಮೂಡಿಸಿದ ವಿಚಿತ್ರ ವಸ್ತುಗಳು

ಹರಾಜೊಂದರಲ್ಲಿ ನೀವು ಹಳೆಯ ಮನೆಯೊಂದನ್ನು ಖರೀದಿಸುತ್ತೀರಿ ಎಂದುಕೊಳ್ಳಿ. ಆಗ ನೀವು ಮನೆಯನ್ನು ನವೀಕರಿಸಲು ಪ್ರಾರಂಭಿಸಿದಾಗ, ಅದರ ಕೋಣೆಯಲ್ಲಿ ನಿಮಗೆ ಗಾಬರಿ ತರುವ ವಸ್ತುಗಳನ್ನು ಕಾಣುತ್ತೀರಿ. ಆಗ ನೀವು ಏನು ಮಾಡುತ್ತೀರಿ ? ಇದರ ಜೊತೆಗೆ ಗುಪ್ತ ಕೋಣೆಯೊಂದರಲ್ಲಿ ಕೆಲ ವಿಚಿತ್ರ ವಸ್ತುಗಳನ್ನು ಕಂಡುಕೊಂಡ, ಹಳೆಯ ಮನೆಯೊಂದನ್ನು ಹರಾಜಿನಲ್ಲಿ ಖರೀದಿಸಿದ ಈ ದಂಪತಿಗಳಿಗೆ ಇದೇ ರೀತಿಯ ಅನುಭವ ಆಗಿದ್ದು, ಅವರು ತಮ್ಮ ಅನುಭವವನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ.

1920ರ ದಶಕದ ಹಳೆಯ ಮನೆಯನ್ನು ಸಾಂಕ್ರಾಮಿಕದ ಅವಧಿಯಲ್ಲಿ ಹರಾಜಿನಲ್ಲಿ ಖರೀದಿಸಿದ ದಂಪತಿ ಈ ವೇಳೆ ದಾಖಲೆಗಳನ್ನು ಪರಿಶೀಲಿಸಿಲ್ಲ. ಆ ವೇಳೆ ಮನೆ ನವೀಕರಣಕ್ಕೆ ಸೂಕ್ತವಾಗಿದೆ ಎಂದು ಅವರು ಭಾವಿಸಿದ್ದರು. ಆದರೆ, ಹರಾಜಿನಲ್ಲಿ ಚೌಕಾಸಿ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಪಡೆದಿದ್ದಾರೆ ದಂಪತಿ.

ʼಕ್ರೆಡಿಟ್ ಕಾರ್ಡ್ʼ ನ ಈ ಲಾಭ ನಿಮಗೆ ತಿಳಿದಿರಲಿ

ಮನೆಯೊಳಗೆ ಕಾಲಿಟ್ಟ ಮೇಳೆ ದಂಪತಿಗೆ ಛಾವಣಿಯಿಂದ ನೇತುಹಾಕಿದ ಬೈಬಲ್, ವಿರೂಪಗೊಂಡ ಮುಖಗಳ ಚಿತ್ರ ಮತ್ತು ಗುಪ್ತ ಕೋಣೆಯಲ್ಲಿ ಕೈಯಿಂದ ಮಾಡಿದ ಶಿಲುಬೆಯನ್ನು ಕಂಡಿವೆ ಎಂದು ಮಿರರ್ ವರದಿ ಮಾಡಿದೆ. ಈ ವಿಡಿಯೋ ನೋಡಿದ ಜನರು ಭೂತ ಓಡಿಸುವವರನ್ನು ಕರೆಯುವಂತೆ ದಂಪತಿಗೆ ಸಲಹೆ ಕೊಟ್ಟಿದ್ದಾರೆ.

“1920ರ ದಶಕದ ಮನೆಯನ್ನು ಸಾಂಕ್ರಾಮಿಕದ ವೇಳೆ ಹರಾಜಿನಿಂದ ದಾಖಲೆಗಳನ್ನು ಪರಿಶೀಲಿಸದೆ ಖರೀದಿಸಿ ನಾವು ದೊಡ್ಡ ತಪ್ಪು ಮಾಡಿದ್ದೇವೆ,” ಎಂದು ದಂಪತಿ ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಿದ ವಿಡಿಯೋಗೆ ಶೀರ್ಷಿಕೆ ಕೊಟ್ಟಿದ್ದಾರೆ ಎಂದು ಮಿರರ್ ವರದಿ ಮಾಡಿದೆ.

ಮನೆಯ ಗುಪ್ತ ಕೋಣೆಯ ಒಳಗೆ ಏನಿದೆ ಎಂದು ಕಂಡು ಗಾಬರಿಯಾದ ದಂಪತಿ, “ಗುಪ್ತ ಕೋಣೆಯೊಳಗೆ ನಾವು ಕಂಡುಕೊಂಡದ್ದು ಆಘಾತಕಾರಿಯಾಗುವಂತಿತ್ತು. ಮೊದಲಿಗೆ ಕೋಣೆ ಖಾಲಿಯಾಗಿದೆ ಎಂದು ನಾವು ಭಾವಿಸಿದ್ದೆವು. ಆದರೆ ಚಾವಣಿಯ ಮೇಲೆ ಕೊಕ್ಕೆಯಿಂದ ನೇತಾಡುತ್ತಿರುವ ಚೀಲವೊಂದರಲ್ಲಿ ಏನೋ ಇತ್ತು.” ದಂಪತಿಗಳು ಅಟ್ಟಿಕ್ ಪ್ರದೇಶವನ್ನು ಪರಿಶೀಲಿಸಿದ ವೇಳೆ ಮೂಲೆಯಲ್ಲಿ ಬಿದ್ದಿರುವ ಹಳೆಯ, ಧೂಳಿನ ಸೂಟ್ಕೇಸ್ ಕಂಡಿದ್ದಾರೆ.

“ಇದು ಒಂದು ರೀತಿಯ ಸುಟ್ಟ ಆಕೃತಿ, ಧೂಳಿನ ಹಿಡಿದ ಟೆಡ್ಡಿ ಬೇರ್‌ ಮತ್ತು ಸುತ್ತಿದ ಚೀಲದಲ್ಲಿರುವ ಪೆಟ್ಟಿಗೆಯೊಂದರಂತೆ ಕಾಣುತ್ತಿದೆ,” ಎಂದು ದಂಪತಿಗಳು ಸ್ಮರಿಸಿದ್ದಾರೆ.

ಮನಃಶಾಸ್ತ್ರಜ್ಞರನ್ನು ಒಮ್ಮೆ ಕರೆಯಿಸಿ ಮನೆಯನ್ನು ಪರಿಶೀಲನೆ ಮಾಡಿಸುವಂತೆ ಕೆಲ ನೆಟ್ಟಿಗರು ದಂಪತಿಗೆ ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...