alex Certify ಎಚ್ಚರ……! ಕೊರೊನಾದಿಂದ ರಕ್ಷಣೆ ಬೇಕೆಂದ್ರೆ ಆ ಜಾಗಕ್ಕೆ ಹೋಗ್ಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ……! ಕೊರೊನಾದಿಂದ ರಕ್ಷಣೆ ಬೇಕೆಂದ್ರೆ ಆ ಜಾಗಕ್ಕೆ ಹೋಗ್ಬೇಡಿ

ಕೊರೊನಾ ವೈರಸ್ ರೋಗ ಇನ್ನೂ ಕಡಿಮೆಯಾಗಿಲ್ಲ. ನಿಧಾನವಾಗಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ಆತಂಕದ ಮಧ್ಯೆ ಡೆಲ್ಟಾ ಪ್ಲಸ್ ಭಯವಿದೆ. ಕೊರೊನಾ ಮೂರನೇ ಅಲೆಯಲ್ಲಿ ಡೆಲ್ಟಾ ಅಬ್ಬರಿಸುವ ಆತಂಕವಿದೆ. ಕೊರೊನಾದಿಂದ ರಕ್ಷಣೆ ಪಡೆಯಬೇಕೆಂದ್ರೆ ಕೆಲ ಸ್ಥಳಗಳಿಗೆ ಹೋಗದಿರುವುದು ಒಳ್ಳೆಯದು. ಇದು ನಮ್ಮನ್ನು ಮಾತ್ರವಲ್ಲ ನಮ್ಮ ಕುಟುಂಬಸ್ಥರನ್ನು ಕೂಡ ಕೊರೊನಾದಿಂದ ರಕ್ಷಿಸಲು ನೆರವಾಗಲಿದೆ.

ಜಿಮ್ : ಕೊರೊನಾ ಲಾಕ್ ಡೌನ್ ನಂತ್ರ ಜಿಮ್ ಬಾಗಿಲು ತೆರೆದಿದೆ. ಕೆಲ ಜಿಮ್ ಗಳಲ್ಲಿ ಸುರಕ್ಷತೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದ್ರೆ ಸಾರ್ವಜನಿಕ ಜಿಮ್ ಗಳಲ್ಲಿ ಹೆಚ್ಚಿನ ಸುರಕ್ಷತೆಯಿಲ್ಲ. ಜಿಮ್ ನಲ್ಲಿ ಹೆಚ್ಚು ಬೆವರುವ ಕಾರಣ ಜನರು ಮಾಸ್ಕ್ ಸರಿಯಾಗಿ ಧರಿಸುವುದಿಲ್ಲ. ಹಾಗಾಗಿ ಜಿಮ್ ಗೆ ಹೋಗುವ ಬದಲು ಮನೆಯಲ್ಲೇ ವ್ಯಾಯಾಮ ಮಾಡಿ.

ಮಾಲ್ : ಹಬ್ಬಗಳು ಹತ್ತಿರ ಬರ್ತಿದೆ. ಜನರು ಮಾಲ್ ಗಳಿಗೆ ಹೋಗ್ತಿದ್ದಾರೆ. ಮಾಲ್ ನಲ್ಲಿ ಕೊರೊನಾ ಹರಡುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಮಾಲ್ ಗಳಿಗೆ ಹೋಗಿ ವಸ್ತುಗಳನ್ನು ಖರೀದಿಸುವ ಬದಲು ಆನ್ಲೈನ್ ನಲ್ಲಿ ಅಥವಾ ಅಕ್ಕಪಕ್ಕದ ಸಣ್ಣ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿ ಮಾಡಿ.

ಅಗತ್ಯ ಮಾರ್ಗಸೂಚಿಗಳನ್ನು ನೀಡುವ ಮೂಲಕ ಸಿನೆಮಾ ಹಾಲ್‌ಗಳನ್ನು ತೆರೆಯಲು ಸರ್ಕಾರ  ಅನುಮತಿ ನೀಡಿದೆ. ಆದ್ರೆ ಈಗ್ಲೂ ಥಿಯೇಟರ್ ಗಳಲ್ಲಿ ಕೊರೊನಾ ಹರಡುವ ಅಪಾಯವಿದೆ. ಹಾಗಾಗಿ ಸಾಧ್ಯವಾದಷ್ಟು ಅಲ್ಲಿಗೆ ಹೋಗುವುದನ್ನು ತಪ್ಪಿಸಿ. ಮನೆಯಲ್ಲೇ ಕುಟುಂಬದೊಂದಿಗೆ ಚಲನಚಿತ್ರಗಳನ್ನು ವೀಕ್ಷಿಸಿ.

ಸರ್ಕಾರ, ಕೊರೊನಾ ಲಸಿಕೆಯನ್ನು ಕಡ್ಡಾಯಗೊಳಿಸಿದೆ. ಇನ್ನೂ ಅನೇಕರಿಗೆ ಕೊರೊನಾ ಲಸಿಕೆ ಸಿಕ್ಕಿಲ್ಲ. ಕೊರೊನಾ ಲಸಿಕೆ ತೆಗೆದುಕೊಳ್ಳದವರ ಮನೆಗೆ ಆದಷ್ಟು ಹೋಗಬೇಡಿ. ಕೊರೊನಾ ಲಸಿಕೆ ಪಡೆಯದವರನ್ನು ಮನೆಗೆ ಕರೆಯುವುದನ್ನು ತಪ್ಪಿಸಿ.

ಸಾರ್ವಜನಿಕ ಸಾರಿಗೆಯಲ್ಲಿ ಕೊರೊನಾ ಹರಡುವ ಸಾಧ್ಯತೆಯಿದೆ. ಮೆಟ್ರೋ-ಬಸ್ ಗಳಲ್ಲಿ ಕೋವಿಡ್-19 ನಿಯಮಗಳನ್ನು ಪಾಲಿಸುವ ಅಗತ್ಯವಿದೆ. ಸಾರ್ವಜನಿಕ ಸಾರಿಗೆ ಪ್ರಯಾಣವನ್ನು ಆದಷ್ಟು ತಪ್ಪಿಸಿ. ಅನಿವಾರ್ಯವಾದಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...