alex Certify ಕೊರೊನಾ ಲಸಿಕೆ ನಂತ್ರ ಈಗ ಬರಲಿದೆ ಆಂಟಿವೈರಲ್ ಮಾತ್ರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ನಂತ್ರ ಈಗ ಬರಲಿದೆ ಆಂಟಿವೈರಲ್ ಮಾತ್ರೆ

ಕೊರೊನಾ ವೈರಸ್ ಎರಡನೇ ಅಲೆ ಮಧ್ಯೆ ಮೂರನೇ ಅಲೆ ಬಗ್ಗೆ ಭಯ ಶುರುವಾಗಿದೆ. ಪ್ರತಿದಿನ ಸುಮಾರು 40 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗ್ತಿವೆ. ಭಾರತದಲ್ಲಿ ಮೂರನೇ ಅಲೆ ಅಬ್ಬರಿಸುವ ಮೊದಲ ಪ್ರತಿಯೊಬ್ಬರು ಕೊರೊನಾ ಲಸಿಕೆ ಪಡೆಯುವುದು ಬಹಳ ಮುಖ್ಯವಾಗಿದೆ.  ಲಸಿಕೆ, ಕೊರೊನಾವನ್ನು ತಡೆಯಲು ಸಹಾಯ ಮಾಡುತ್ತಿದೆ. ಜೊತೆಗೆ ಜನರ ಸಾವಿನ ಅಪಾಯವನ್ನು ಕಡಿಮೆ ಮಾಡಿದೆ.

ವಿಶ್ವದಾದ್ಯಂತ ಅನೇಕ ಕೊರೊನಾ ಲಸಿಕೆಗಳು ಬಂದಿವೆ. ಲಸಿಕೆಯ ನಂತರ ಈಗ ಮಾತ್ರೆಗಳು ಬರಬಹುದು ಎಂಬ ಸುದ್ದಿಯಿದೆ. ದಕ್ಷಿಣ ಸ್ವೀಡನ್‌ನ ಸೈನ್ಸ್ ಪಾರ್ಕ್ ನಲ್ಲಿ ಕೊರೊನಾ ನಿಯಂತ್ರಣದ ಮಾತ್ರೆ ಸಿದ್ಧವಾಗ್ತಿದೆ ಎಂದು ಕೆಲವು ವರದಿಗಳು ಹೇಳಿವೆ. ಇದು ರೋಗಲಕ್ಷಣಗಳು ಮತ್ತು ಕೊರೊನಾ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು ಎನ್ನಲಾಗಿದೆ.

ಇದು ಆಂಟಿವೈರಲ್ ಮಾತ್ರೆಯಾಗಿರಲಿದೆ. ವರದಿಗಳ ಪ್ರಕಾರ, ಕೊರೊನಾ ಪಾಸಿಟಿವ್ ಇರುವ ಜನರು ಕೊರೊನಾ ಆಂಟಿವೈರಲ್ ಔಷಧಿಯನ್ನು ತೆಗೆದುಕೊಳ್ಳಬಹುದು. ಮನೆಯಲ್ಲಿ ಚಿಕಿತ್ಸೆ ಪಡೆಯುವ ಕೊರೊನಾ ರೋಗಿಗಳೂ ಇದನ್ನು ಬಳಸಬಹುದು. ಇದು ಸೌಮ್ಯವಾದ ರೋಗಲಕ್ಷಣಗಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

BIG NEWS: ಆರು ತಿಂಗಳಲ್ಲಿ 5.25 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಳೆದುಕೊಂಡ‌ ರೈಲು ಪ್ರಯಾಣಿಕರು

ಸಾಮಾನ್ಯವಾಗಿ, ಲಸಿಕೆ, ವೈರಸ್ ದೇಹವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಆಂಟಿವೈರಲ್ ಮಾತ್ರೆಗಳು ಸೋಂಕಿನ ನಂತರ ವೈರಸ್ ನಾಶ ಮಾಡಲು ನೆರವಾಗುತ್ತವೆ. ಲಸಿಕೆಯು ವೈರಸ್ ವಿರುದ್ಧ ರಕ್ಷಣೆ ನೀಡಿದ್ರೆ, ಆಂಟಿವೈರಲ್ ಔಷಧವು ಕೊರೊನಾ ಸೋಂಕಿನ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

ವರದಿಗಳ ಪ್ರಕಾರ, ಈ ವರ್ಷವೇ ಆಂಟಿವೈರಲ್ ಔಷಧಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಅಮೆರಿಕನ್ ಔಷಧಿ ಕಂಪನಿ ಮರ್ಕ್ ಈಗಾಗಲೇ ಮೌಖಿಕ ಆಂಟಿವೈರಲ್ ಔಷಧ ಮೊಲ್ಲುಪಿರವಿರ್‌ಗಾಗಿ ಎಫ್‌ಡಿಎ ಅನುಮೋದನೆಯನ್ನು ಪಡೆದಿದೆ. ಮತ್ತೊಂದೆಡೆ ಜಪಾನ್‌ನ ಫಾರ್ಮಾ ಕಂಪನಿಯು ಇತ್ತೀಚೆಗೆ ಮಾತ್ರೆಯ ಕ್ಲಿನಿಕಲ್ ಪ್ರಯೋಗವನ್ನು ಆರಂಭಿಸಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...