alex Certify ಲಸಿಕೆ ಬಗ್ಗೆ ಮುಖ್ಯ ಮಾಹಿತಿ: ಕೊರೋನಾ ಬಂದ್ರೆ 3 ತಿಂಗಳ ನಂತ್ರ ವ್ಯಾಕ್ಸಿನ್ ಪಡೆಯಬಹುದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಬಗ್ಗೆ ಮುಖ್ಯ ಮಾಹಿತಿ: ಕೊರೋನಾ ಬಂದ್ರೆ 3 ತಿಂಗಳ ನಂತ್ರ ವ್ಯಾಕ್ಸಿನ್ ಪಡೆಯಬಹುದು

ಬೆಂಗಳೂರು: ವ್ಯಕ್ತಿಯು ಕೋವಿಡ್ ಸೋಂಕು ಹೊಂದಿದ್ದರೆ ಗುಣಮುಖರಾದ ಮೂರು ತಿಂಗಳ ನಂತರ ಲಸಿಕೆ ಪಡೆಯಬಹುದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಚೇರಿಯಿಂದ ಮಾಹಿತಿ ನೀಡಲಾಗಿದೆ.

ಕೋವಿಡ್-19 ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಗುಂಪು ಶಿಫಾರಸಿನ ಅನ್ವಯ ಭಾರತ ಸರ್ಕಾರದ ಉಲ್ಲೇಖಿತ ಪತ್ರದಲ್ಲಿ ಯಾವುದೇ ವ್ಯಕ್ತಿಯು ಕೋವಿಡ್ -19 ಮುಂದಿನ ಲಸಿಕ ಡೋಸ್ ಅನ್ನು ಕೋವಿಡ್ ಸೋಂಕಿನಿಂದ ಗುಣಮುಖರಾದ ಮೂರು ತಿಂಗಳ ನಂತರ ಪಡೆಯಬಹುದಾಗಿರುತ್ತದೆ.

ಈ ಮಾರ್ಗಸೂಚಿಯು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿದ ಫಲಾನುಭವಿಗಳ ಮುನ್ನೆಚ್ಚರಿಕೆ ಲಸಿಕೆ ಡೋಸ್ ಗೂ ಅನ್ವಯವಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...