alex Certify ರಾಜ್ಯಕ್ಕೆ ಬಿಗ್ ಶಾಕ್: ಹೊಸದಾಗಿ 19 ಸಾವಿರ ಮಂದಿಗೆ ಸೋಂಕು, 81 ಸಾವು – ಬೆಂಗಳೂರು, ಜಿಲ್ಲಾ ಕೇಂದ್ರಗಳಲ್ಲೂ ಸುನಾಮಿ; ಬೆಚ್ಚಿಬೀಳಿಸುವಂತಿದೆ ಕೊರೋನಾ ಬ್ಲಾಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಕ್ಕೆ ಬಿಗ್ ಶಾಕ್: ಹೊಸದಾಗಿ 19 ಸಾವಿರ ಮಂದಿಗೆ ಸೋಂಕು, 81 ಸಾವು – ಬೆಂಗಳೂರು, ಜಿಲ್ಲಾ ಕೇಂದ್ರಗಳಲ್ಲೂ ಸುನಾಮಿ; ಬೆಚ್ಚಿಬೀಳಿಸುವಂತಿದೆ ಕೊರೋನಾ ಬ್ಲಾಸ್ಟ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 19,067 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,61,065 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇವತ್ತು 4603 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 10,14,152 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು ಒಂದೇ ದಿನ 81 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 13,351 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಬರೋಬ್ಬರಿ 1,33,543 ಸಕ್ರಿಯ ಪ್ರಕರಣಗಳು ಇವೆ. 620 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸುನಾಮಿ ಎದ್ದಿದೆ. ಒಂದೇ ದಿನ 12,793 ಜನರಿಗೆ ಸೋಂಕು ತಗುಲಿದ್ದು, 60 ಮಂದಿ ಸೋಂಕಿತರು ಸಾವನ್ನಪ್ಪಿದ್ದು, 97,897 ಸಕ್ರಿಯ ಪ್ರಕರಣಗಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...