alex Certify ಸಹಕಾರಿ ಸಂಘಗಳು ತಮ್ಮ ಹೆಸರಿನೊಂದಿಗೆ ‘ಬ್ಯಾಂಕ್’ ಪದ ಬಳಕೆ ಮಾಡುವಂತಿಲ್ಲ – RBI ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಕಾರಿ ಸಂಘಗಳು ತಮ್ಮ ಹೆಸರಿನೊಂದಿಗೆ ‘ಬ್ಯಾಂಕ್’ ಪದ ಬಳಕೆ ಮಾಡುವಂತಿಲ್ಲ – RBI ಮಹತ್ವದ ಸೂಚನೆ

ಸಹಕಾರಿ ಸಂಘಗಳು ತಮ್ಮ ಹೆಸರಿನಲ್ಲಿ ಬ್ಯಾಂಕ್​ ಎಂದು ಬಳಸುವ ಮೂಲಕ ತಮ್ಮ ಸದಸ್ಯರಲ್ಲದ ಗ್ರಾಹಕರಿಂದ ಠೇವಣಿಗಳನ್ನು ಸ್ವೀಕರಿಸುತ್ತಿರುವುದರ ಬಗ್ಗೆ ಆರ್.​ಬಿ.ಐ. ಸಾರ್ವಜನಿಕರನ್ನು ಎಚ್ಚರಿಸಿದೆ.
ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆ 1949ರ ತಿದ್ದುಪಡಿಯ ನಂತರ 2020ರ ಸೆಪ್ಟೆಂಬರ್​ 29ರಿಂದ ಅನ್ವಯವಾಗುವಂತೆ ಆರ್.​ಬಿ.ಐ.ನಿಂದ ಅನುಮತಿ ಪಡೆದವರನ್ನು ಹೊರತುಪಡಿಸಿ ಯಾವುದೇ ಸಹಕಾರಿ ಸಂಘಗಳು ತಮ್ಮ ಹೆಸರಿನ ಭಾಗವಾಗಿ ಬ್ಯಾಂಕ್, ಬ್ಯಾಂಕರ್​ ಅಥವಾ ಬ್ಯಾಂಕಿಂಗ್​​​ ಎಂದು ಹೆಸರಿನಲ್ಲಿ ಬಳಕೆ ಮಾಡುವಂತಿಲ್ಲ ಎಂದು ರಿಸರ್ವ್​ ಬ್ಯಾಂಕ್​ ಹೇಳಿದೆ.

ಕೆಲ ಸಹಕಾರಿ ಸಂಘಗಳು ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ತಮ್ಮ ಹೆಸರಿನಲ್ಲಿ ಬ್ಯಾಂಕ್​ ಪದವನ್ನು ಬಳಕೆ ಮಾಡುತ್ತಿರೋದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆರ್.​ಬಿ.ಐ. ಈ ಹೇಳಿಕೆಯನ್ನು ಹೊರಡಿಸಿದೆ.

ಕೆಲವು ಸಹಕಾರಿ ಸಂಘಗಳು ಸದಸ್ಯರಲ್ಲದ ಅಥವಾ ನಾಮ ಮಾತ್ರ ಸದಸ್ಯರಿಂದ ಅಥವಾ ಸಹ ಸದಸ್ಯರಿಂದ ಬ್ಯಾಂಕ್​​ ಹೆಸರಿನಲ್ಲಿ ಠೇವಣಿಗಳನ್ನು ಸ್ವೀಕರಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಕೂಡ ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರ್.​ಬಿ.ಐ. ಹೇಳಿದೆ.

ಇದು ಮಾತ್ರವಲ್ಲದೇ ಠೇವಣಿ ವಿಮೆ ಹಾಗೂ ಕ್ರೆಡಿಟ್​ ಗ್ಯಾರಂಟಿ ಕಾರ್ಪೋರೇಷನ್​​ನ ವಿಮಾ ರಕ್ಷಣೆಯು ಈ ಸೊಸೈಟಿಗಳಲ್ಲಿ ಇರಿಸಲಾದ ಠೇವಣಿಗಳಿಗೆ ಲಭ್ಯವಿರೋದಿಲ್ಲ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...