alex Certify ಹೃದಯಾಘಾತಕ್ಕೆ ಕಾರಣವಾಗಬಹುದು ಚಳಿಗಾಲದಲ್ಲಿನ ಐಸ್ ಕ್ರೀಮ್ ಸೇವನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತಕ್ಕೆ ಕಾರಣವಾಗಬಹುದು ಚಳಿಗಾಲದಲ್ಲಿನ ಐಸ್ ಕ್ರೀಮ್ ಸೇವನೆ…!

ಚಳಿಗಾಲ, ಮಳೆಗಾಲದಲ್ಲೂ ಕೆಲವರು ಸಾಕಷ್ಟು ತಣ್ಣೀರು ಕುಡಿಯುತ್ತಾರೆ, ಐಸ್ ಕ್ರೀಮ್ ತಿನ್ನುತ್ತಾರೆ. ಈ ರೀತಿಯ ಅಭ್ಯಾಸ ನಿಮಗೂ ಇದ್ದರೆ ಎಚ್ಚರದಿಂದಿರಿ. ಚಳಿಗಾಲದಲ್ಲಿ ಫ್ರಿಡ್ಜ್‌ ನೀರು ಕುಡಿಯುವುದು, ಐಸ್‌ಕ್ರೀಮ್‌ ತಿನ್ನುವುದು ಹೃದಯಾಘಾತಕ್ಕೆ ಕಾರಣವಾಗಬಹುದು.

ಫ್ರಿಡ್ಜ್‌ನಲ್ಲಿಟ್ಟ ತಣ್ಣೀರು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಚಳಿಗಾಲದಲ್ಲಿಯೂ ಇದನ್ನು ಕುಡಿಯುವುದರಿಂದ ಇನ್ನಷ್ಟು ದುಷ್ಪರಿಣಾಮಗಳಾಗುತ್ತವೆ. ಬೇಸಿಗೆಯಲ್ಲಂತೂ ಬಾಟಲಿಯಲ್ಲಿ ನೀರು ತುಂಬಿಸಿ ಫ್ರಿಡ್ಜ್‌ನ್ಲಲಿಟ್ಟುಬಿಡುತ್ತೇವೆ. ಆಗಾಗ ಅದನ್ನೇ ಕುಡಿಯುತ್ತೇವೆ.

ಚಳಿಗಾಲದಲ್ಲಿ ಸಾಮಾನ್ಯ ನೀರೇ ಹೆಚ್ಚು ತಂಪಾಗಿರುತ್ತದೆ. ಹಾಗಾಗಿ ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯುವ ಅಗತ್ಯವೇ ಇರುವುದಿಲ್ಲ. ಆದರೂ ಫ್ರಿಡ್ಜ್‌ ನೀರನ್ನೇ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಅನೇಕ ರೋಗಗಳು ಬರಬಹುದು. ಚಳಿಗಾಲದಲ್ಲಿ ತಣ್ಣೀರು ಸ್ನಾನವನ್ನೂ ಮಾಡಬಾರದು. ಚಳಿಯಲ್ಲಿ ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳ ಸೇವನೆಯಿಂದ ಕೂಡ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.

ಆಯುರ್ವೇದದ ಪ್ರಕಾರ ಶೀತ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಳಿಗಾಲದಲ್ಲಿ ತಣ್ಣನೆಯ ವಸ್ತುಗಳ ಸೇವನೆ ನಿಷಿದ್ಧ. ತಣ್ಣೀರು ಕುಡಿಯುವುದರಿಂದ ರಕ್ತ ಪರಿಚಲನೆ ನಿಧಾನವಾಗುತ್ತದೆ. ಇದರ ಸಂಪೂರ್ಣ ಪರಿಣಾಮವು ಜೀರ್ಣಕ್ರಿಯೆಯ ಮೇಲೂ ಆಗಬಹುದು.

ಇದೆಲ್ಲದರ ಹೊರತಾಗಿ ಹೊಟ್ಟೆಯಲ್ಲಿ ಗ್ಯಾಸ್, ಮಲಬದ್ಧತೆ, ಅಸಿಡಿಟಿ ಸಮಸ್ಯೆಗಳು ಬರಬಹುದು. ವಾತ ಮತ್ತು ಕಫ ಕೂಡ ಬರಬಹುದು. ಜೊತೆಗೆ ಕೆಮ್ಮು, ನೆಗಡಿ, ಗಂಟಲು ನೋವಿಗೆ ಕಾರಣವಾಗುತ್ತದೆ.  ಎದೆಯಲ್ಲಿ ಕಫ ಶೇಖರಣೆಯಾಗುವ ಸಾಧ್ಯತೆಯೂ ಇರುತ್ತದೆ.

ಚಳಿಗಾಲದಲ್ಲಿ ಅತಿಯಾಗಿ ತಂಪು ಆಹಾರ ಸೇವಿಸಿದರೆ ಅಥವಾ ತಣ್ಣನೆಯ ನೀರು ಕುಡಿದರೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಕರಗಲು ಸಮಯ ಹಿಡಿಯುತ್ತದೆ. ಇದರಿಂದಾಗಿ ಸ್ಥೂಲಕಾಯತೆ  ವೇಗವಾಗಿ ಹೆಚ್ಚಾಗುತ್ತದೆ. ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಬಯಸಿದರೆ ತಣ್ಣೀರು ಕುಡಿಯುವುದನ್ನು ತಪ್ಪಿಸಿ. ಬಿಸಿ ಬಿಸಿ ನೀರನ್ನೇ ಕುಡಿಯಿರಿ.

ಚಳಿಗಾಲದಲ್ಲಿ ತುಂಬಾ ತಣ್ಣೀರು ಕುಡಿಯುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ಇದು ನಿಮ್ಮ ನರಮಂಡಲಕ್ಕೆ ಹಾನಿ ಉಂಟುಮಾಡಬಹುದು. ತಣ್ಣೀರು ವಾಗಸ್ ನರಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಾಗಿ ಹೃದಯ ಬಡಿತದಲ್ಲಿ ಬದಲಾವಣೆಗಳಾಗಿ ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತದೆ.

ಅತಿಯಾಗಿ ತಣ್ಣೀರು ಕುಡಿಯುವುದರಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳ ಸಮತೋಲನವು ಹಾಳಾಗುತ್ತದೆ. ಇದರಿಂದಾಗಿ ದೇಹವು ನಿರ್ಜಲೀಕರಣ ಮತ್ತು ಅಪೌಷ್ಟಿಕತೆಗೆ ಬಲಿಯಾಗಬಹುದು. ಹೆಚ್ಚು ತಣ್ಣೀರು ಕುಡಿಯುವ ಜನರಲ್ಲಿ ಚಯಾಪಚಯ ನಿಧಾನವಾಗುತ್ತದೆ. ಇದರಿಂದಾಗಿ ಆಯಾಸ, ಸೋಮಾರಿತನ ಮತ್ತು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ.

ಹೊಟ್ಟೆಯಲ್ಲಿ ಯಾವುದೇ ರೀತಿಯ ಸೋಂಕು ಕಾಣಿಸಿಕೊಂಡರೆ   ಜೀರ್ಣಾಂಗ ವ್ಯವಸ್ಥೆಯು ನಿಧಾನವಾಗುತ್ತದೆ. ಆದ್ದರಿಂದ ತಣ್ಣೀರು ಕುಡಿಯುವುದನ್ನು ತಪ್ಪಿಸಿ. ತಣ್ಣೀರು ಕುಡಿಯುವುದರಿಂದ ಹೊಟ್ಟೆ ಬಿಗಿಯಾಗುತ್ತದೆ. ಹೊಟ್ಟೆಯಿಂದ ಶಬ್ದಗಳು ಬರಲು ಪ್ರಾರಂಭಿಸುತ್ತವೆ. ಇವು ಗಂಭೀರ ಕಾಯಿಲೆಗಳ ಲಕ್ಷಣಗಳಾಗಿರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...