alex Certify ಈ ಆಹಾರ ಜೊತೆಯಾಗಿ ಸೇವಿಸುವುದು ಅನಾರೋಗ್ಯಕ್ಕೆ ದಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಹಾರ ಜೊತೆಯಾಗಿ ಸೇವಿಸುವುದು ಅನಾರೋಗ್ಯಕ್ಕೆ ದಾರಿ

ಉತ್ತಮ ಆಹಾರಗಳನ್ನು ಸೇವಿಸಿದರೆ ಆರೋಗ್ಯವು ಚೆನ್ನಾಗಿರುತ್ತದೆ. ಇದರಿಂದ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಕೆಲವು ಆಹಾರಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಅವುಗಳನ್ನು ಜೊತೆಯಾಗಿ ಸೇವಿಸಬಾರದು. ಹಾಗಾಗಿ ಆಹಾರ ಸೇವಿಸುವಾಗ ತುಂಬಾ ಕಾಳಜಿ ವಹಿಸಿ.

*ಮೊಸರು : ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ 1 ಚಮಚ ಮೊಸರನ್ನು ಸೇವಿಸಿ. ಆದರೆ ಮೊಸರಿನೊಂದಿಗೆ ಕೆಲವು ವಸ್ತುಗಳನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ. ಮೊಸರಿನೊಂದಿಗೆ ಹುಳಿಹಣ್ಣುಗಳನ್ನು ಸೇವಿಸಬಾರದು. ಇದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಬಿಸಿ ವಸ್ತುಗಳನ್ನು ಮೊಸರಿನೊಂದಿಗೆ ಸೇವಿಸಬಾರದು. ಮೀನಿನ ಖಾದ್ಯ ಮೊಸರಿನೊಂದಿಗೆ ಸೇವಿಸಬಾರದು.

*ಹಾಲು ಆರೋಗ್ಯಕ್ಕೆ ಉತ್ತಮ. ಆದರೆ ಹಾಲು ಮತ್ತು ಹಸಿರು ತರಕಾರಿಗಳನ್ನು ಒಟ್ಟಿಗೆ ಸೇವಿಸಬೇಡಿ. ಉದ್ದಿನ ಬೇಳೆಯಿಂದ ತಯಾರಿಸಿದ ಆಹಾರ ಸೇವಿಸಿದ ಬಳಿಕ ಹಾಲು ಸೇವಿಸಬೇಡಿ. ಚೀಸ್, ಮಾಂಸ, ಮೊಟ್ಟೆಗಳನ್ನು ಸೇವಿಸಿದ ಬಳಿಕ ಹಾಲು ಕುಡಿಯಬೇಡಿ.

*ಜೇನುತುಪ್ಪ : ಜ್ವರ ಬಂದಾಗ ಜೇನುತುಪ್ಪ ಸೇವಿಸಬೇಡಿ. ಇದರಿಂದ ದೇಹದಲ್ಲಿ ಪಿತ್ತ ಹೆಚ್ಚಾಗುತ್ತದೆ. ಬೆಣ್ಣೆ ಮತ್ತು ತುಪ್ಪವನ್ನು ಜೇನುತುಪ್ಪದೊಂದಿಗೆ ಸೇವಿಸಬೇಡಿ. ಇದಲ್ಲದೇ ವೈನ್, ಹುಳಿ, ಹಲಸಿನ ಹಣ್ಣು, ಸೌತೆಕಾಯಿಯನ್ನು ಜೇನುತುಪ್ಪದೊಂದಿಗೆ ಸೇವಿಸಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...