alex Certify ಬೆಚ್ಚಿಬೀಳಿಸುತ್ತೆ ವಂಚಕ ಸುಕೇಶ್​ನಿಂದ ನಟಿ ಜಾಕ್ವೆಲಿನ್ ಪಡೆದ ಉಡುಗೊರೆಗಳ ಪಟ್ಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ವಂಚಕ ಸುಕೇಶ್​ನಿಂದ ನಟಿ ಜಾಕ್ವೆಲಿನ್ ಪಡೆದ ಉಡುಗೊರೆಗಳ ಪಟ್ಟಿ..!

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್​ ಚಂದ್ರಶೇಖರ್​​ ಪ್ರಕರಣ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಹಾಗೂ ನೋರಾ ಫತೇಹಿ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಇಬ್ಬರು ಬಾಲಿವುಡ್​ ನಟಿಯರು ಆರೋಪಿ ಸುಕೇಶ್​ನಿಂದ ಐಷಾರಾಮಿ ಕಾರುಗಳು ಸೇರಿದಂತೆ ವಿವಿಧ ದುಬಾರಿ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಸುಕೇಶ್​ ಚಂದ್ರಶೇಖರ್, ಜಾಕ್ವೆಲಿನ್​ ಫರ್ನಾಂಡಿಸ್​ ಮೇಕಪ್​ ಆರ್ಟಿಸ್ಟ್​ ಶಾನ್​ ಮುಟ್ಟತ್ತಿಲ್​ ಮೂಲಕ ನಟಿಯನ್ನು ಸಂಪರ್ಕಿಸಿದ್ದರು ಎಂದು ಮನಿ ಲ್ಯಾಂಡರಿಂಗ್​ ವಿರೋಧಿ ಕಾನೂನಿನ ಅಡಿಯಲ್ಲಿ ಸಲ್ಲಿಸಲಾದ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಜಾಕ್ವೆಲಿನ್​ ವಿದೇಶಕ್ಕೆ ಹಾರುವುದನ್ನು ತಡೆದಿದ್ದ ಇಡಿ ಅಧಿಕಾರಿಗಳು ನಟಿಯನ್ನು ವಿಚಾರಣೆಗೆ ಒಳಪಡಿಸಿದ್ದರು.

ನಟಿ ಜಾಕ್ವೆಲಿನ್​ ಆಗಸ್ಟ್​ ಹಾಗೂ ಅಕ್ಟೋಬರ್​ನಲ್ಲಿ ದಾಖಲಿಸಿದ ಹೇಳಿಕೆಯಲ್ಲಿ ಗುಶ್ಶಿ ಹಾಗೂ ಶನೆಲ್​ನಿಂದ 2 ಡಿಸೈನರ್​ ಬ್ಯಾಗುಗಳು, 2 ಗುಶ್ಶಿ ಜಿಮ್​ ಬಟ್ಟೆ, 1 ಜೋಡಿ ಲ್ಯೂಯಿಸ್​ ವಿಟಾನ್​ ಶೂಗಳು, 2 ಜೋಡಿ ವಜ್ರದ ಕಿವಿಯೋಲೆ ಹಾಗೂ ಬ್ರೆಸ್ಲೇಟ್ಗಳನ್ನು ಉಡುಗೊರೆ ರೂಪದಲ್ಲಿ ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ ಮಿನಿ ಕೂಪರ್​ ಕಾರನ್ನು ತಾನು ಸುಕೇಶ್​ಗೆ ಹಿಂದಿರುಗಿಸಿದ್ದಾಗಿಯೂ ಇದೇ ವೇಳೆ ಜಾಕ್ವೆಲಿನ್​ ಹೇಳಿದ್ದಾರೆ.

ಇನ್ನೊಂದೆಡೆ ಸುಕೇಶ್​ ಚಂದ್ರಕುಮಾರ್​ ಇಡಿ ವಿಚಾರಣೆಯ ವೇಳೆಯಲ್ಲಿ ತಾನು 7 ಕೋಟಿ ರೂಪಾಯಿ ಮೌಲ್ಯದ ಆಭರಣವನ್ನು ಜಾಕ್ವೆಲಿನ್​ಗೆ ನೀಡಿರೋದಾಗಿ ಹೇಳಿದ್ದಾನೆ. ಜೊತೆಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಜಾಕ್ವೆಲಿನ್​ ಸಹೋದರಿಗೆ 1.13 ಕೋಟಿ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದೇನೆ ಎಂದು ಹೇಳಿದ್ದಾನೆ. ಇದರ ಜೊತೆಯಲ್ಲಿ ಆಕೆಗೆ ಬಿಎಂಡಬ್ಲು ಎಕ್ಸ್​ 5 ಕಾರನ್ನು ನೀಡಿರೋದಾಗಿ ಹೇಳಿದ್ದಾನೆ. ಜಾಕ್ವೆಲಿನ್ ತಾಯಿಗೆ ಪೋರ್ಷೆ ಕಾರನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...