alex Certify ಗಗನಕ್ಕೇರಿದ LPG ಸಿಲಿಂಡರ್​ ಬೆಲೆ: ನನ್ನ ನಿವಾಸಕ್ಕೆ ಒಲೆ ವ್ಯವಸ್ಥೆ ಮಾಡಿಕೊಡಿ ಎಂದ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಗನಕ್ಕೇರಿದ LPG ಸಿಲಿಂಡರ್​ ಬೆಲೆ: ನನ್ನ ನಿವಾಸಕ್ಕೆ ಒಲೆ ವ್ಯವಸ್ಥೆ ಮಾಡಿಕೊಡಿ ಎಂದ ಶಾಸಕ

ಉತ್ತರ ಪ್ರದೇಶದ ಕಾಂಗ್ರೆಸ್​ ಎಂಎಲ್​​ಸಿ ಎಲ್​​ಪಿಜಿ ಸಿಲಿಂಡರ್​ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸರ್ಕಾರಿ ನಿವಾಸಕ್ಕೆ ಒಲೆಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ.

ಕಾಂಗ್ರೆಸ್​ ಎಂಎಲ್​ಸಿ ದೀಪಕ್​ ಸಿಂಗ್​​ ತಮಗೆ ಮನೆ ಮಂಜೂರು ಮಾಡಿರುವ ಉಸ್ತುವಾರಿ ಅಧಿಕಾರಿಗೆ ಈ ಬೇಡಿಕೆ ಪತ್ರವನ್ನು ರವಾನಿಸಿದ್ದಾರೆ. 2024ರವರೆಗೆ ಎಲ್​ಪಿಜಿ ಸಿಲಿಂಡರ್​ ದರ ಕಡಿಮೆಯಾಗುವ ಮಾತೇ ಇಲ್ಲ ಎಂದು ಅವರು ಹೇಳಿದ್ದಾರೆ.

ನನಗೆ ನೀಡಲಾಗಿರುವ ಅಪಾರ್ಟ್​ಮೆಂಟ್​​ನಲ್ಲಿ ಒಲೆಯ ಸೌಕರ್ಯ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಪ್ರಸ್ತುತ ಸಿಲಿಂಡರ್​ ದರವನ್ನು ನೋಡಿದರೆ ಕಟ್ಟಿಗೆ ಹಾಗೂ ಕಲ್ಲಿದ್ದಲು ವ್ಯವಸ್ಥೆ ಮಾಡಿಕೊಳ್ಳುವುದೇ ಅಗ್ಗ ಎನಿಸಲಿದೆ.

975 ರೂಪಾಯಿ ಮೌಲ್ಯದ ಸಿಲಿಂಡರ್​​ನ್ನು ತಿಂಗಳಲ್ಲಿ 2 ಬಾರಿ ರೀಫಿಲ್​ ಮಾಡಿಕೊಳ್ಳಬೇಕು. ಆದರೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿದಲ್ಲಿ ತಿಂಗಳಿಗೆ 500 ರೂಪಾಯಿ ಖರ್ಚು ಆಗಲಿದೆ ಎಂದು ಹೇಳಿದ್ದಾರೆ.

2024ಕ್ಕಿಂತಲೂ ಮೊದಲು ಸಿಲಿಂಡರ್​ ದರ ಇಳಿಕೆ ಕಾಣುವುದು ಕನಸಿನ ಮಾತಾಗಿರುವುದರಿಂದ ನಾನಿರುವ ಅಪಾರ್ಟ್​ಮೆಂಟ್​​ನಲ್ಲಿ ವಾಸಿಸುತ್ತಿರುವ ಬಹುತೇಕ ಶಾಸಕರು ಒಲೆ ವ್ಯವಸ್ಥೆಯನ್ನೇ ಬಯಸುತ್ತಿದ್ದಾರೆ ಎಂದು ದೀಪಕ್​ ಸಿಂಗ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...