alex Certify Gruha Jyoti Scheme : ಜೂನ್ ತಿಂಗಳ ವಿದ್ಯುತ್ ಬಿಲ್ ನಲ್ಲಿ ಗೊಂದಲ, ಅವರಿಗೆ ಹಣ ವಾಪಸ್ ನೀಡುತ್ತೇವೆ : ಸಚಿವ ಕೆ.ಜಾರ್ಜ್ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Gruha Jyoti Scheme : ಜೂನ್ ತಿಂಗಳ ವಿದ್ಯುತ್ ಬಿಲ್ ನಲ್ಲಿ ಗೊಂದಲ, ಅವರಿಗೆ ಹಣ ವಾಪಸ್ ನೀಡುತ್ತೇವೆ : ಸಚಿವ ಕೆ.ಜಾರ್ಜ್ ಸ್ಪಷ್ಟನೆ

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಆಗಸ್ಟ್ 5 ರಂದು ಚಾಲನೆ ನೀಡಲಾಗುವುದು, ಜುಲೈ ತಿಂಗಳ ‘ವಿದ್ಯುತ್ ಬಿಲ್’ ಕಟ್ಟಿದ್ರೆ ಅವರಿಗೆ ವಾಪಸ್ ಹಣ ನೀಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೂನ್ ತಿಂಗಳಿನ ವಿದ್ಯುತ್ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳ ಶುಲ್ಕ ಕೂಡ ಸೇರ್ಪಡೆಯಾಗಿದ್ದರೆ ಹೆಚ್ಚುವರಿ ದಿನಗಳ ಹಣ ನಿಮಗೆ ಮರುಪಾವತಿಯಾಗಲಿದೆ ಎಂದರು. ಜೂನ್ ತಿಂಗಳ ವಿದ್ಯುತ್ ಬಿಲ್ನಲ್ಲಿ ಸ್ವಲ್ಪ ಗೊಂದಲಗಳಿತ್ತು. ಆ ತಿಂಗಳ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳು ಸೇರಿಕೊಂಡಿವೆ. ಅಂತಹ ಗ್ರಾಹಕರಿಗೆ ಕ್ರೆಡಿಟ್ ಕೊಡುತ್ತೇವೆ. ಬಾಕಿ ಮೊತ್ತ ಇಲ್ಲದಿದ್ದರೆ ನಾಲ್ಕು ತಿಂಗಳ ಬಳಿಕ ಹಣ ಹಿಂದಿರುಗಿಸುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಆಗಸ್ಟ್ 5 ಕ್ಕೆ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ 1 ಕೋಟಿ ನಲವತ್ತು ಲಕ್ಷ ಕುಟುಂಬಗಳು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಗೃಹಜ್ಯೋತಿ ನೋಂದಣಿಗೆ ಕೊನೆ ದಿನಾಂಕ ಇಲ್ಲವಾದರೂ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬರುವ ಜುಲೈ ತಿಂಗಳ ವಿದ್ಯುತ್ ಬಳಕೆಯ ಬಿಲ್ ಝೀರೋ ಬರಬೇಕಾದರೆ ಅದಕ್ಕಿಂತ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಅಂತಿಮ ಗಡುವುನೊಳಗೆ ನೋಂದಣಿ ಮಾಡದಿದ್ದರೆ ಎಂದಿನಂತೆ ರೆಗ್ಯೂಲರ್ ಬಿಲ್ ಬರುತ್ತದೆ ಎಂದರು. ಜುಲೈ ಒಂದರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಿದೆ. ಆದರೆ ಇದಕ್ಕೆ ಅಧಿಕೃತವಾಗಿ ಚಾಲನೆಯನ್ನು ಅಗಸ್ಟ್ 5 ಕ್ಕೆ ನೀಡಲಾಗುತ್ತದೆ ಎಂದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...