alex Certify ಕಾಂಡೋಮ್, ಗರ್ಭನಿರೋಧಕ ಮಾತ್ರೆ ಮಾರಾಟ ಭಾರಿ ಹೆಚ್ಚಾಗಿದ್ದು ಈ ಅವಧಿಯಲ್ಲೇ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಡೋಮ್, ಗರ್ಭನಿರೋಧಕ ಮಾತ್ರೆ ಮಾರಾಟ ಭಾರಿ ಹೆಚ್ಚಾಗಿದ್ದು ಈ ಅವಧಿಯಲ್ಲೇ

ನವದೆಹಲಿ: 2020-2021ರ ಅವಧಿಯಲ್ಲಿ ಭಾರತದಲ್ಲಿ ಕೋವಿಡ್-19 ಲಾಕ್‌ ಡೌನ್‌ ಗಳು ಮತ್ತು ನಿರ್ಬಂಧಗಳ ಸಮಯದಲ್ಲಿ ಕಾಂಡೋಮ್‌ ಗಳು ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟವು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ.

ಈ ಅವಧಿಯಲ್ಲಿ ಗರ್ಭನಿರೋಧಕಗಳ ಮಾರಾಟ ಹೆಚ್ಚಾದರೆ, ಪುರುಷ ಮತ್ತು ಸ್ತ್ರೀ ಸಂತಾನಹರಣಗಳು ತೀವ್ರವಾಗಿ ಕುಸಿದವು. ಲಾಕ್‌ ಡೌನ್‌ ಗಳು ಮತ್ತು ಕೋವಿಡ್ ನಿರ್ಬಂಧಗಳ ಹೊರತಾಗಿಯೂ ಕಾಂಡೋಮ್ ವಿತರಣೆಯು ಶೇಕಡ 7 ರಷ್ಟು ಏರಿಕೆಯಾಗಿದೆ. ಅದೇ ಸಮಯದಲ್ಲಿ ಗರ್ಭನಿರೋಧಕ ಮಾತ್ರೆಗಳ ಬಳಕೆಯು ದುಪ್ಪಟ್ಟಾಯಿತು.

ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ ವರದಿಯಲ್ಲಿ, 2020-21ರ FY ನಲ್ಲಿ ಪ್ರಾಜೆಕ್ಟ್ ಸೆಟ್ಟಿಂಗ್‌ ಹೊರತುಪಡಿಸಿ HIV ಸೌಲಭ್ಯಗಳ ಮೂಲಕ ಉಚಿತ ಕಾಂಡೋಮ್‌ ಗಳನ್ನು ವಿತರಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ಕಳೆದ ವರ್ಷದ 40 ಕೋಟಿ ರೂ. ಬಜೆಟ್‌ಗೆ ಹೋಲಿಸಿದರೆ, ಈ ವರ್ಷ TI ಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಹೆಚ್‌ಐವಿ ಸೌಲಭ್ಯಗಳಲ್ಲಿ HRG ಗಾಗಿ ಉಚಿತ ಕಾಂಡೋಮ್‌ಗಳನ್ನು ಒದಗಿಸಿದ ಹೆಚ್ಚಿದ ಬೇಡಿಕೆ ಪೂರೈಸಲು 77 ಕೋಟಿ ರೂ. ನೀಡಲಾಗಿದೆ.

ಸಾಂಕ್ರಾಮಿಕ ರೋಗದ ಹೊರತಾಗಿಯೂ, ಕಾಂಡೋಮ್ ವಿತರಣೆಯು 2020-21 ಕ್ಕೆ ಹೋಲಿಸಿದರೆ ಶೇಕಡ 7.2 ರಷ್ಟು ಹೆಚ್ಚಾಗಿದೆ. ರಾಜ್ಯವಾರು ಅಂಕಿಅಂಶಗಳ ಪ್ರಕಾರ, ಉತ್ತರ ಪ್ರದೇಶ, ನಂತರ ರಾಜಸ್ಥಾನ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳವು ಕಾಂಡೋಮ್ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ ಮತ್ತು ಜಾರ್ಖಂಡ್ ನಂತರದ ಸ್ಥಾನದಲ್ಲಿವೆ.

2020-21ರಲ್ಲಿ 31.45 ಕೋಟಿಗೆ ಹೋಲಿಸಿದರೆ 2021-22ರಲ್ಲಿ ಸುಮಾರು 33.70 ಕೋಟಿ ಕಾಂಡೋಮ್‌ಗಳು ಮಾರಾಟವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...