alex Certify ಜಾಹೀರಾತಿಗೆ ಟೈಗರ್‌ ಶ್ರಾಫ್‌ ಚಿತ್ರದ ಈ ಡೈಲಾಗ್‌ ಬಳಸಿಕೊಂಡ ಕಾಂಡೋಮ್ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಹೀರಾತಿಗೆ ಟೈಗರ್‌ ಶ್ರಾಫ್‌ ಚಿತ್ರದ ಈ ಡೈಲಾಗ್‌ ಬಳಸಿಕೊಂಡ ಕಾಂಡೋಮ್ ಕಂಪನಿ

ಪ್ರಖ್ಯಾತ ಕಾಂಡೋಮ್ ಬ್ರಾಂಡ್ ಡ್ಯೂರೆಕ್ಸ್ ಟೈಗರ್ ಶ್ರಾಫ್ ಅವರ ಹೀರೋಪಂತಿ ಚಿತ್ರದ ಡೈಲಾಗ್‌ಗೆ ಟ್ವಿಸ್ಟ್ ನೀಡಿ ಬಳಸಿಕೊಂಡು ಗಮನ ಸೆಳೆದಿದೆ.

‘ಹೀರೋಪಂತಿ’ ಸಾಲಿನ ‘ಚೋಟಿ ಬಚ್ಚಿ ಹೋ ಕ್ಯಾ?’ ಎಂದು ಚೂಟಿಯಾಗಿ ತಿರುಚಿ ಪ್ರಚಾರಕ್ಕೆ ಬಳಸಿದೆ. ಟೈಗರ್‌ನ ಚೊಚ್ಚಲ ಚಿತ್ರ ‘ಹೀರೋಪಂತಿ’ ಯ ಸಾಲು ಜಾಲತಾಣದ ಹೊಸ ಮೆಮೆ ಫೀಡರ್ ಆಗಿದ್ದು, ಜನಪ್ರಿಯ ಕಾಂಡೋಮ್ ಬ್ರಾಂಡ್‌ ಕೂಡ ಬಳಸಿದೆ.

ಬಿಕಿನಿ ಮೇಲೆ ಹಿಂದೂ ದೇವರ ಚಿತ್ರ: ಬಟ್ಟೆ ಕಂಪನಿ ವಿರುದ್ಧ ಸಿಡಿದೆದ್ದ ನೆಟ್ಟಿಗರು……!

ಡ್ಯುರೆಕ್ಸ್ ಇತ್ತೀಚೆಗೆ ಇನ್‌ಸ್ಟಾದಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದೆ. ರಕ್ಷಣಾತ್ಮಕ ಸೆಕ್ಸ್ ಬಗ್ಗೆ ಈ ಪೋಸ್ಟ್ ಜಾಗೃತಿ ಮೂಡಿಸುತ್ತದೆ. ಸೆಕ್ಸ್ ಮತ್ತು ಟೈಗರ್‌ನ ‘ಚೋಟಿ ಬಚ್ಚಿ ಹೋ ಕ್ಯಾ’ ಡೈಲಾಗ್‌ಗೆ ಟ್ವಿಸ್ಟ್ ಕೊಟ್ಟಿರುವುದು ಕಾಂಡೋಮ್ ಬ್ರ್ಯಾಂಡ್‌ನ ಈ ವಿಶಿಷ್ಟ ಪೋಸ್ಟ್ ಇಂಟರ್ನೆಟ್ ಸೆನ್ಸೇಶನ್ ಸೃಷ್ಟಿ ‌ಮಾಡಿದೆ.

“ಕಿತ್ನಿ ಬಾರ್ ಕಹಾ ಹೈ ಪ್ರೊಟೆಕ್ಷನ್ ಯೂಸ್ ಕರೋ, ಛೋಟೆ ಬಚ್ಚೆ ಕರ್ನೆ ಹೈ ಕ್ಯಾ…?” ಎಂದು ಪೋಸ್ಟ್ ನಲ್ಲಿ ಓದಲು ಸಿಗಲಿದೆ.

‘ಹೊರತೆಗೆಯುವುದು’ ಹೀರೋಪಂತಿಗೆ ಸಮಾನವಲ್ಲ‌ ಎಂದು ಚಮ್ಕಾಯಿಸಿದೆ. ಡ್ಯುರೆಕ್ಸ್‌ನ ಚಮತ್ಕಾರಿ ಪೋಸ್ಟ್‌ಗೆ ನೆಟ್ಟಿಗರು ಶಬ್ಬಾಸ್ ಗಿರಿ ನೀಡಿದ್ದಾರೆ.

ಇದಕ್ಕೂ ಮೊದಲು ನವವಿವಾಹಿತರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರಿಗೆ ಡ್ಯೂರೆಕ್ಸ್ ವಿಶೇಷ ರೀತಿಯಲ್ಲಿ ಶುಭ ಹಾರೈಸಿ ಗಮನ ಸೆಳೆದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...