alex Certify ಬಿಕಿನಿ ಮೇಲೆ ಹಿಂದೂ ದೇವರ ಚಿತ್ರ: ಬಟ್ಟೆ ಕಂಪನಿ ವಿರುದ್ಧ ಸಿಡಿದೆದ್ದ ನೆಟ್ಟಿಗರು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಕಿನಿ ಮೇಲೆ ಹಿಂದೂ ದೇವರ ಚಿತ್ರ: ಬಟ್ಟೆ ಕಂಪನಿ ವಿರುದ್ಧ ಸಿಡಿದೆದ್ದ ನೆಟ್ಟಿಗರು……!

‘ಸಹಾರಾ ರೇ ಸ್ವಿಮ್’ ಹೆಸರಿನ ಬಟ್ಟೆ ಬ್ರಾಂಡ್ ಹೊಸ ವಿವಾದ ಹುಟ್ಟುಹಾಕಿದೆ. ಹೊಸದಾಗಿ ಲಾಂಚ್‌ ಮಾಡಿರೋ ಈಜುಡುಗೆಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿದೆ. ಸಹಾರಾ ರೇ ಒಡೆತನದಲ್ಲಿರುವ ಬ್ರಾಂಡ್‌ ಇದಾಗಿದೆ.

‘ಔರಾ ಕಲೆಕ್ಷನ್ 2022’ ಹೆಸರಿನಲ್ಲಿ ಈ ಸ್ವಿಮ್‌ ಸೂಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಥಾಂಗ್ಸ್ ಮತ್ತು ಮೈಕ್ರೋ ಸ್ಟ್ರಿಂಗ್ ಟಾಪ್‌ಗಳನ್ನು ಒಳಗೊಂಡಿರುವ ಹೊಸ ಸಂಗ್ರಹ ಇದಾಗಿದೆ. ಇವುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಲಾಗಿದೆ. ಈ ವಿವಾದಾತ್ಮಕ ಸ್ವಿಮ್‌ ಸೂಟ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬಿಕಿನಿ ಹಾಗೂ ಟಾಪ್‌ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿರೋದು ನೆಟ್ಟಿಗರನ್ನು ಕೆರಳಿಸಿದೆ. ದೇವರ ಚಿತ್ರ ಮುದ್ರಿಸಲೇಬೇಕೆಂಬ ಉದ್ದೇಶ ಕಂಪನಿಗಿದ್ದರೆ, ಯಾಕೆ ಜೀಸಸ್‌ ಚಿತ್ರವನ್ನು ಮುದ್ರಿಸಿಲ್ಲ ಅಂತಾ ಟ್ವಿಟ್ಟರ್‌ ಬಳಕೆದಾರನೊಬ್ಬ ಪ್ರಶ್ನಿಸಿದ್ದಾನೆ. ಹಿಂದುತ್ವ ಅನ್ನೋದು ಜೋಕ್‌ ಅಲ್ಲ, ಅಥವಾ ಕಂಪನಿಗಳಿಗೆ ಹಣ ಮಾಡಿಕೊಳ್ಳುವ ಮಾರ್ಗವೂ ಅಲ್ಲವೆಂದು ಮತ್ತೋರ್ವ ಆಕ್ರೋಶ ಹೊರಹಾಕಿದ್ದಾನೆ.

ಸಹರಾ ರೇ ಕಂಪನಿ ಈ ರೀತಿ ಮಾಡಿರೋದು ಇದೇ ಮೊದಲೇನಲ್ಲ. 2019ರಲ್ಲಿ ಫ್ಲೋರ್‌ ಮ್ಯಾಟ್‌ ಹಾಗೂ ಟಾಯ್ಲೆಟ್‌ ಕವರ್‌ಗಳ ಮೇಲೆ ಹಿಂದು ದೇವತೆಗಳ ಚಿತ್ರವನ್ನು ಮುದ್ರಿಸಿತ್ತು. ಅದನ್ನು ಅಮೇಜಾನ್‌ನಲ್ಲಿ ಮಾರಾಟಕ್ಕಿಡಲಾಗಿತ್ತು.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...