
ಸಮಯ್ ರೈನಾ ಗರ್ಭಪಾತದ ಬಗ್ಗೆ ಜೋಕ್ ಒಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ನಿನ್ನೆ ನಾನು ಅರ್ಧ ಗಂಟೆ ಯೋಚನೆ ಮಾಡಿ ನನ್ನ ಗರ್ಲ್ಫ್ರೆಂಡ್ ಬಗ್ಗೆ ಒಂದು ಫನ್ನಿ ಟ್ವೀಟ್ ಬರೆದಿದ್ದೆ. ಆದರೆ ಆಕೆ ಅದನ್ನು ಇಷ್ಟ ಪಡದ ಕಾರಣ ನಾನು ಅದನ್ನು ಡಿಲೀಟ್ ಮಾಡಬೇಕಾಯ್ತು. ಮುಂದಿನ ದಿನಗಳಲ್ಲಿ ನಾನು ನಿನ್ನನ್ನು ಗರ್ಭಪಾತ ಮಾಡಿಸಲು ಕರೆದುಕೊಂಡು ಹೋದಾಗಲೂ ನನ್ನ ದೇಹ. ನನ್ನ ಆಯ್ಕೆ ಎನ್ನಬೇಡ ಎಂದು ಬರೆದಿದ್ದಾರೆ.
ಇದೇ ಜೋಕ್ನ್ನು ಮುಂದುವರಿಸಿ ಮತ್ತೊಂದು ಪೋಸ್ಟ್ನ್ನು ಟ್ವೀಟ್ ಮಾಡಿದ್ದಾರೆ. ನನ್ನ ಗೆಳತಿ ನನ್ನ ಫನ್ನಿ ಟ್ವೀಟ್ನ್ನು ಅಳಿಸುವಂತೆ ಮಾಡಿದ್ದಾಳೆ ಎಂದು ನಾನು ಸರಳವಾದ ಹಾಸ್ಯವನ್ನು ಮಾಡಿದ್ದೇನೆ. ಅಂದಮೇಲೆ ನಾನು ಆಕೆಯ ಗರ್ಭವನ್ನು ಡಿಲೀಟ್ ಮಾಡಿಸಬಹುದು. ಇದು ಸ್ಪಷ್ಟವಾಗಿ ವ್ಯಂಗ್ಯಾತ್ಮಕ ಹಾಸ್ಯವಾಗಿತ್ತು. ಅವಳು ತಮಾಷೆಯನ್ನು ಇಷ್ಟಪಡಲಿಲ್ಲ ಮತ್ತು ನಾನು ಅದನ್ನು ಬದಲಾಯಿಸಬೇಕಾಗಿದೆ. ಅಲ್ಲದೇ ಇನ್ಮೇಲೆ ನಾನು ಎಕ್ಸ್ ಗರ್ಲ್ಫ್ರೆಂಡ್ ಎಂದು ಹೇಳಬೇಕು ಎಂದು ಬರೆದಿದ್ದಾರೆ.
ಆದರೆ ಈ ಟ್ವೀಟ್ ಟ್ವೀಟಿಗರಿಗೆ ಯಾಕೋ ಇಷ್ಟವಾದಂತೆ ಕಾಣಲಿಲ್ಲ. ಇಂತಹ ಕೆಟ್ಟ ಜೋಕ್ನ್ನು ನಾವೆಲ್ಲೂ ಕಂಡೇ ಇಲ್ಲ ಎಂದು ಕಿಡಿ ಕಾರ್ತಿದ್ದಾರೆ.