alex Certify ಅರ್ಧಕ್ಕೆ ಕಾಲೇಜು ತೊರೆದರೂ ತಿಂಗಳಿಗೆ 8 ಲಕ್ಷ ರೂ. ಗಳಿಸುತ್ತಾಳೆ ಈಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಧಕ್ಕೆ ಕಾಲೇಜು ತೊರೆದರೂ ತಿಂಗಳಿಗೆ 8 ಲಕ್ಷ ರೂ. ಗಳಿಸುತ್ತಾಳೆ ಈಕೆ…!

ಪ್ರತಿಯೊಬ್ಬರೂ ತಮ್ಮದೇ ಆದ ಪ್ರತಿಭೆ ಇರುತ್ತದೆ. ಕೆಲವರು ಕಷ್ಟಪಟ್ಟು ಅಧ್ಯಯನ ಮಾಡಬಹುದು ಮತ್ತು ಕ್ಷೇತ್ರದಲ್ಲಿ ಪರಿಣತ ಹೊಂದಿದರೆ, ಇನ್ನು ಕೆಲವರು ತಮ್ಮ ಕೌಶಲದಿಂದ ಮುಂದೆ ಬರುತ್ತಾರೆ. ತಮ್ಮ ಕೌಶಲದಿಂದ ಮುಂದೆ ಬಂದು ತಿಂಗಳಿಗೆ ಸುಮಾರು $10,000 (ಸುಮಾರು ರೂ 8.29 ಲಕ್ಷ) ಗಳಿಸುವ ಕಾಲೇಜು ಅರ್ಧಕ್ಕೆ ಬಿಟ್ಟ ಯುವತಿಯ ಕಥೆಯಿದು.

ಈಕೆಯ ಹೆಸರು ಮ್ಯಾಡಿ. ಈಕೆ ಇಷ್ಟೊಂದು ಹಣ ಗಳಿಸುತ್ತಿರುವುದು ಟಿಕ್‌ಟಾಕ್ ವಿಡಿಯೋದ ಮೂಲಕ. ಮೊದಮೊದಲಿಗೆ ಸುಮ್ಮನೇ ಟಿಕ್​ಟಾಕ್​ ಮಾಡುತ್ತಿದ್ದ ಈಕೆಗೆ ಅಭಿಮಾನಿಗಳು ಹೆಚ್ಚುತ್ತಲೇ ಹೋದರು. ಈಕೆ ಸಕತ್​ ಫೇಮಸ್​ ಆದ ಮೇಲೆ ಜಾಹೀರಾತು ಕಂಪೆನಿಗಳು ತಮ್ಮ ಬ್ರ್ಯಾಂಡ್‌ಗಳ ಪ್ರಮೋಷನ್​ಗೆ ಈಕೆಯ ಮೊರೆ ಹೋಗುತ್ತಿವೆ.

ಮೊದಮೊದಲು ಕೆಲ ವರ್ಷ ನನ್ನ ಫಾಲೋವರ್ಸ್​ ಸಂಖ್ಯೆ ಕೂಡ ಕಡಿಮೆ ಇತ್ತು. ಆದರೂ ಛಲ ಬಿಡದೇ ಟಿಕ್​ಟಾಕ್​ ಮೂಲಕ ವಿಡಿಯೋ ಮಾಡಿ ಹಾಕುತ್ತಿದ್ದೆ. ಈಗ ಎಂಟು ತಿಂಗಳ ಹಿಂದೆ ಯಶಸ್ಸಿನ ಕಡೆ ಹೆಜ್ಜೆ ಇಟ್ಟಿದ್ದೇನೆ ಎನ್ನುತ್ತಾರೆ ಮ್ಯಾಡಿ.

ಯುಜಿಸಿ (User Generate Content) ಅಧ್ಯಯನ ಮಾಡುವ ಮೂಲಕ ಮತ್ತು ವಿಡಿಯೋದ ವಿಷಯದಲ್ಲಿ ಜಾಣತನದ ಆಯ್ಕೆ ಮಾಡುವ ಮೂಲಕ ಈಕೆ ಮುಂದೆ ಬಂದಿದ್ದಾರೆ. ಜನರಿಗೆ ಏನು ಬೇಕು ಎನ್ನುವುದನ್ನು ಅರಿತು ಈಕೆ ವಿಡಿಯೋ ಮಾಡುತ್ತಾರೆ. ಆಕೆ ಪಾಲುದಾರಿಕೆ ಮಾಡಿಕೊಂಡಿರುವ ಹಲವಾರು ಬ್ರ್ಯಾಂಡ್‌ಗಳಿಂದಲೂ ಈಕೆ ಗಳಿಸುತ್ತಿದ್ದಾಳೆ. ಈಕೆಯಂತೆ ಪತಿ ಕೂಡ ಶಾಲೆ ಡ್ರಾಪ್​ಔಟ್​ ಆಗಿದ್ದು, ಈಗ ಇಬ್ಬರೂ ಯುಜಿಸಿ ಕ್ರಿಯೇಟರ್​ ಆಗಿದ್ದಾರೆ. ಅವರು 15 ಅಥವಾ 30-ಸೆಕೆಂಡ್ ಪೋಸ್ಟ್‌ಗೆ $250 (ಅಂದಾಜು ರೂ. 21,000) ಮತ್ತು 30 ಪೋಸ್ಟ್‌ಗಳಿಗೆ $3,600 (ಬಹುತೇಕ ರೂ.3 ಲಕ್ಷ) ರಿಂದ ಶುಲ್ಕ ವಿಧಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...