alex Certify 4 ತಿಂಗಳ ಅವಧಿಯಲ್ಲಿ 100 ಕಿ.ಮೀ. ಸಂಚರಿಸಿ ಬಾಂಗ್ಲಾ ತಲುಪಿದ ಭಾರತದ ಹುಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ತಿಂಗಳ ಅವಧಿಯಲ್ಲಿ 100 ಕಿ.ಮೀ. ಸಂಚರಿಸಿ ಬಾಂಗ್ಲಾ ತಲುಪಿದ ಭಾರತದ ಹುಲಿ..!

ಭಾರತದ ಕಾಡಿನಲ್ಲಿದ್ದ ರೆಡಿಯೋ ಕಾಲರ್ ಅಳವಡಿಸಿದ್ದ ಹುಲಿಯೊಂದು ನಾಲ್ಕು ತಿಂಗಳಲ್ಲಿ ಬರೋಬ್ಬರಿ 100 ಕಿಲೋಮೀಟರ್​ ಪ್ರಯಾಣಿಸಿದ್ದು ಬಾಂಗ್ಲಾದೇಶದ ಮ್ಯಾಂಗ್ರೋವ್ಸ್​ನಲ್ಲಿ ಪತ್ತೆಯಾಗಿದೆ.

ಈ ಸುದೀರ್ಘ ಪ್ರಯಾಣದಲ್ಲಿ ಹುಲಿಯು 1 ಕಿಲೋಮೀಟರ್​ಗೂ ಹೆಚ್ಚು ಉದ್ದದ ನದಿಯನ್ನೂ ದಾಟಿದೆ ಎಂದು ಪಶ್ಚಿಮ ಬಂಗಾಳದ ವನ್ಯಜೀವಿಗಳ ವಾರ್ಡನ್​ ಮುಖ್ಯಸ್ಥ ವಿ.ಕೆ. ಯಾದವ್​ ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್​ನಲ್ಲಿ ಈ ಗಂಡು ಹುಲಿಗೆ ರೆಡಿಯೋ​ ಕಾಲರ್​ ಅಳವಡಿಸಲಾಗಿತ್ತು. ಇದರಿಂದಾಗಿ ಇದರ ಪ್ರಯಾಣವನ್ನ ಟ್ರ್ಯಾಕ್​ ಮಾಡೋದು ಸುಲಭವಾಗಿದೆ.

ಬಡ ವೃದ್ದನ ಪ್ರತಿಭೆಗೆ ಮಾರುಹೋದ ನೆಟ್ಟಿಗರು

ಭಾರತದಿಂದ ಬಾಂಗ್ಲಾದೇಶಕ್ಕೆ ನಾಲ್ಕು ತಿಂಗಳ ಪ್ರಯಾಣದಲ್ಲಿ ಈ ಹುಲಿಯು ಯಾವುದೇ ಮಾನವ ಸಂಕುಲ ಇರುವ ಸ್ಥಳಗಳಿಗೆ ತೆರಳಿಲ್ಲ ಎಂದು ಯಾದವ್​ ಹೇಳಿದ್ದಾರೆ.

ಹಾಲಿನ ದರ ಕಡಿತ, ಸಂಕಷ್ಟದ ಹೊತ್ತಲ್ಲೇ ಹಾಲು ಉತ್ಪಾದಕರಿಗೆ ಶಾಕಿಂಗ್ ನ್ಯೂಸ್

ಆರಂಭದ ಕೆಲವು ದಿನಗಳಲ್ಲಿ ಭಾರತದಲ್ಲೇ ಇದ್ದ ಹುಲಿಯು ಬಳಿಕ ಬಾಂಗ್ಲಾದೇಶದ ಸುಂದರ್​ ಬನದ ತಲ್ಪಟ್ಟಿ ದ್ವೀಪಕ್ಕೆ ಕಾಲಿಟ್ಟಿದೆ. ಹಾಗೂ ಚೋಟೋ, ಹರಿ ಖಾಲಿ, ಬೋರೋ ಹರಿಕಾಲಿ ಹಾಗೂ ರೈಮಂಗಲ್​ ಸೇರಿದಂತೆ ವಿವಿಧ ನದಿಗಳನ್ನ ಅದು ದಾಟಿದೆ.

ಡಿಸೆಂಬರ್​ 27ರಂದು ತನ್ನ ಪ್ರಯಾಣ ಆರಂಭಿಸಿದ ಹುಲಿ ಮೇ 11ರಂದು ಬಾಂಗ್ಲಾದೇಶ ತಲುಪಿದೆ. ಈ ನಡುವೆ ಮೂರು ದ್ವೀಪಗಳನ್ನ ಅದು ದಾಟಿದೆ ಎಂದು ಯಾದವ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...