alex Certify ಹಾಲಿನ ದರ ಕಡಿತ, ಸಂಕಷ್ಟದ ಹೊತ್ತಲ್ಲೇ ಹಾಲು ಉತ್ಪಾದಕರಿಗೆ ಶಾಕಿಂಗ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲಿನ ದರ ಕಡಿತ, ಸಂಕಷ್ಟದ ಹೊತ್ತಲ್ಲೇ ಹಾಲು ಉತ್ಪಾದಕರಿಗೆ ಶಾಕಿಂಗ್ ನ್ಯೂಸ್

ತುಮಕೂರು: ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಪರಿಣಾಮ ಭಾರಿ ಪ್ರಮಾಣದ ಹಾಲು ಸಂಗ್ರಹವಾಗುತ್ತಿದೆ. ಇದರಿಂದಾಗಿ ಒಂದು ಲೀಟರ್ ಹಾಲಿಗೆ 40 ಎಂಎಲ್ ಹಾಲು ಉಚಿತವಾಗಿ ಕೊಡಲಾಗುತ್ತಿದೆ.

ಕೊರೋನಾ ಲಾಕ್ಡೌನ್ ಕಾರಣದಿಂದ ಮಾರುಕಟ್ಟೆ ಕಳೆದುಕೊಂಡು ಹಾಲು, ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ. ಇದರಿಂದಾಗಿ ಹಾಲು ಒಕ್ಕೂಟಗಳಿಗೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಷ್ಟದಿಂದ ಪಾರಾಗಲು ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಕಡಿತಗೊಳಿಸಿದೆ.

ಜೂನ್ 8 ರಿಂದ ಜಾರಿಗೆ ಬರುವಂತೆ ಒಂದು ಲೀಟರ್ ಹಾಲಿಗೆ ಎರಡು ರೂಪಾಯಿ ಕಡಿತ ಮಾಡಲಾಗಿದೆ. ಮೊದಲೇ ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಹೈನುಗಾರರಿಗೆ ಹಾಲಿನ ದರ ಕಡಿತ ಮಾಡಿರುವುದರಿಂದ ಲೀಟರ್ ಗೆ 2 ರೂ. ಕಡಿಮೆ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...