alex Certify ನಾಳೆ ನವಲಗುಂದಕ್ಕೆ ಸಿಎಂ ಸೇರಿ ಸಚಿವರ ದಂಡು: ವಾಹನ ಸಂಚಾರ ಮಾರ್ಗ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ನವಲಗುಂದಕ್ಕೆ ಸಿಎಂ ಸೇರಿ ಸಚಿವರ ದಂಡು: ವಾಹನ ಸಂಚಾರ ಮಾರ್ಗ ಬದಲಾವಣೆ

ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳ ವಿತರಣೆ ಕಾರ್ಯಕ್ರಮವನ್ನು ಫೆ. 24, 2024 ರಂದು ಸಂಜೆ 4 ಗಂಟೆಗೆ ನವಲಗುಂದದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾರ್ಯಕ್ರಮದಲ್ಲಿ ಘನ ಉಪಸ್ಥಿತರಿರುವರು. ಶಾಸಕರಾದ ಎನ್. ಎಚ್. ಕೋನರಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಸಚಿವರಾದ ಹೆಚ್. ಕೆ. ಪಾಟೀಲ್, ಡಾ. ಜಿ.ಪರಮೇಶ್ವರ್, ಸಂತೋಷ್ ಎಸ್. ಲಾಡ್, ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ ಜಾರಕಿಹೊಳಿ, ಡಾ. ಹೆಚ್.ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಬಿ. ಝಡ್. ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ಕೆ. ವೆಂಕಟೇಶ್, ರಹೀಂಖಾನ್, ಎನ್. ಚೆಲುವರಾಸ್ವಾಮಿ, ಸುರೇಶ್ ಬಿ.ಎಸ್., ಬಿ.ನಾಗೇಂದ್ರ, ಶಿವರಾಜ್ ತಂಗಡಗಿ, ಎಂ.ಸಿ.ಸುಧಾಕರ್, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಸಂಚಾರ ಮಾರ್ಗ ಬದಲಾವಣೆ

ನವಲಗುಂದದಲ್ಲಿ ಫೆಬ್ರವರಿ 24 ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಂ.218 ವಿಜಾಪುರ – ಹುಬ್ಬಳ್ಳಿ ಮಾರ್ಗದ ಸಂಚಾರ ದಟ್ಟಣೆ ನಿಯಂತ್ರಿಸಲು ಮಾರ್ಗ ಬದಲಾವಣೆ ಮಾಡಲಾಗಿದೆ.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶ ಹೊರಡಿಸಿದ್ದಾರೆ. ಫೆಬ್ರವರಿ 24 ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಚಾರದಲ್ಲಿ ಬದಲಾವಣೆ ಇರಲಿದೆ.

ಹುಬ್ಬಳ್ಳಿ ಕಡೆಯಿಂದ ಬರುವ ಭಾರೀ ಗಾತ್ರದ ವಾಹನಗಳು ಕುಸುಗಲ್ ನಿಂದ ಬ್ಯಾಹಟ್ಟಿ, ತಿರ್ಲಾಪೂರ, ಹಾಳಕುಸುಗಲ್ ಕ್ರಾಸ್, ಅಳಗವಾಡಿ ಮಾರ್ಗವಾಗಿ ನರಗುಂದ ಕಡೆಗೆ ಹೋಗುವುದು. ವಿಜಯಪುರ ಕಡೆಯಿಂದ ಬರುವ ಭಾರೀ ಗಾತ್ರದ ವಾಹನಗಳು ನರಗುಂದದಿಂದ, ಅಳಗವಾಡಿ, ತಿರ್ಲಾಪೂರ, ಬ್ಯಾಹಟ್ಟಿ, ಕುಸುಗಲ್ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ಹೋಗುವುದು.

ಹುಬ್ಬಳ್ಳಿ ಕಡೆಯಿಂದ ಬರುವ ಬಸ್‍ಗಳನ್ನು ಯಮನೂರದಿಂದ, ತಿರ್ಲಾಪೂರ, ಹಾಳಕುಸುಗಲ್ ಕ್ರಾಸ್, ಅಳಗವಾಡಿ, ಗೊಬ್ಬರಗುಂಪಿ, ಗೊಬ್ಬರಗುಂಪಿ ಕ್ರಾಸ್ ಮೂಲಕ ನರಗುಂದ ಕಡೆಗೆ ಹೋಗುವುದು. ವಿಜಯಪುರ ಕಡೆಯಿಂದ ಬರುವ ಬಸ್ ಗಳನ್ನು ಗೊಬ್ಬರಗುಂಪಿ ಕ್ರಾಸ್, ಗೊಬ್ಬರಗುಂಪಿ, ಅಳಗವಾಡಿ. ಹಾಳಕುಸುಗಲ್ ಕ್ರಾಸ್, ತಿರ್ಲಾಪೂರ, ಯಮನೂರ ಮಾರ್ಗವಾಗಿ ಹೋಗುವುದು. ಅಣ್ಣಿಗೇರಿ ಕಡೆಯಿಂದ ಬರುವ ಭಾರೀ ಗಾತ್ರದ ವಾಹನಗಳನ್ನು ಹಳ್ಳಿಕೇರಿ, ನಾವಳ್ಳಿ, ಶಲವಡಿ, ತಡಹಾಳ, ನರಗುಂದ ಮಾರ್ಗವಾಗಿ ಹೋಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...