alex Certify ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಚಿತ್ರದುರ್ಗ ಜಿಲ್ಲಾ ಪ್ರವಾಸ: ವಿವಿಧ ಮಠಗಳಿಗೆ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಚಿತ್ರದುರ್ಗ ಜಿಲ್ಲಾ ಪ್ರವಾಸ: ವಿವಿಧ ಮಠಗಳಿಗೆ ಭೇಟಿ

ಬೆಂಗಳೂರು: ಬಿಜೆಪಿ ನೂತನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ನಿವಾಸ, ಮುರುಘ ರಾಜೇಂದ್ರ ಮಠ, ಕೃಷ್ಣ ಯಾದವಾನಂದ ಮಠ, ಮಾದರ ಚೆನ್ನಯ್ಯ ಮಠ, ಬೋವಿ ಗುರುಪೀಠಕ್ಕೆ ಭೇಟಿ ನೀಡಲಿದ್ದಾರೆ.

ನಂತರ ಸಿರಿಗೆರೆ ಬೃಹನ್ಮಠ, ಭಗೀರಥ ಗುರುಪೀಠ, ಸಾಣೇಹಳ್ಳಿಯ ತರಳಬಾಳು ಬೃಹನ್ಮಠ, ಹೊಸದುರ್ಗ ಪಟ್ಟಣದಲ್ಲಿರುವ ಕುಂಚಟಿಗ ಮಹಾಸಂಸ್ಥಾನ, ಹೊಸದುರ್ಗದ ಕನಕ ಗುರು ಪೀಠ ಶಾಖಾ ಮಠಕ್ಕೆ ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಮಠಾಧೀಶರ ಆಶೀರ್ವಾದ ಪಡೆಯಲಿರುವ ಅವರು ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...