alex Certify ವಿಡಿಯೋ ಮೂಲಕ ಬದುಕು ಬದಲಿಸಿಕೊಳ್ಳಲು ಹೋದವಳ ದುರಂತ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ಮೂಲಕ ಬದುಕು ಬದಲಿಸಿಕೊಳ್ಳಲು ಹೋದವಳ ದುರಂತ ಸಾವು

Crane Operator TikTok Video Shows Fatal Fall of Xiao Qiumei ] | Heavy.com

ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಪ್ರಾಣವನ್ನು ಪಣಕ್ಕಿಟ್ಟು ಸಾಹಸಕ್ಕೆ ಕೈ ಹಾಕ್ತಾರೆ. ಚೀನಾದ ಟಿಕ್ ಟಾಕ್ ಕಲಾವಿದೆಯೊಬ್ಬಳು ಫಾಲೋವರ್ಸ್ ಗಾಗಿ 160 ಅಡಿ ಎತ್ತರಕ್ಕೆ ಏರಿ ಸಾಹಸ ಮಾಡಲು ಮುಂದಾಗಿದ್ದು ತಪ್ಪಾಗಿದೆ.

ಚೀನಾದ ನಿವಾಸಿ 23 ವರ್ಷದ ಕ್ಸಿಯಾವೋ ಕ್ಯುಮಿಯವರು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದಿದ್ದಾಳೆ. ಡೈಲಿ ಲೈಫ್‌ಗೆ ಸಂಬಂಧಿಸಿದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಳು. ಕ್ರೇನ್ ಆಪರೇಟರ್ ಆಗಿದ್ದ ಕ್ಸಿಯಾವೋ, ವಿಡಿಯೋ ಅಪ್ಲೋಡ್ ಮಾಡಲು 160 ಅಡಿ ಎತ್ತರಕ್ಕೆ ಹೋಗಿದ್ದಾಳೆ. ಅಲ್ಲಿ ಸಾಹಸ ಮಾಡುವ ಸಂದರ್ಭದಲ್ಲಿ ಕಾಲು ಜಾರಿದೆ. ಕ್ರೇನ್ ಕೆಳಗೆ ಬಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ.

ಮೊಬೈಲ್ ನಲ್ಲಿ ವಿಡಿಯೋ ಮಾಡ್ತಿದ್ದ ಕ್ಸಿಯಾವೋ, ಕೆಳಗೆ ಬಿದ್ದಾಗಲೂ ವಿಡಿಯೋ ರೆಕಾರ್ಡ್ ಆಗ್ತಿತ್ತಂತೆ. ಕ್ಸಿಯಾವೋ ಎರಡು ಮಕ್ಕಳ ತಾಯಿ. ಕ್ರೇನ್ ಆಪರೇಟರ್ ಆಗಿದ್ದ ಆಕೆ, ವಿಡಿಯೋ ಮೂಲಕ ತನ್ನ ಬದುಕು ಬದಲಿಸಿಕೊಳ್ಳುವ ಯೋಜನೆ ರೂಪಿಸಿದ್ದಳು. ಆದ್ರೆ ಕ್ಸಿಯಾವೋ ಕುಟುಂಬಸ್ಥರು ಇದು ಸ್ಟಂಟ್ ಎಂಬುದನ್ನು ಅಲ್ಲಗಳೆದಿದ್ದಾರೆ. ಇದು ಅಪಘಾತ ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...