alex Certify Watch | ಒಂದೇ ಚಾಟಿಯೇಟಿನಲ್ಲಿ 42 ಮೋಂಬತ್ತಿ ಆರಿಸಿದ ಚೀನಾ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch | ಒಂದೇ ಚಾಟಿಯೇಟಿನಲ್ಲಿ 42 ಮೋಂಬತ್ತಿ ಆರಿಸಿದ ಚೀನಾ ವ್ಯಕ್ತಿ

ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೆಲವೇ ಸೆಕೆಂಡ್‌ಗಳಲ್ಲಿ ಆರಿಸುವುದನ್ನು ಮಕ್ಕಳೂ ಮಾಡುತ್ತಾರೆ. ಆದರೆ ಈ ಸಿಂಪಲ್ ಕೆಲಸಕ್ಕೆ ಬಲು ನಾಜೂಕಿನ ಟ್ವಿಸ್ಟ್ ಕೊಟ್ಟಿದ್ದಾರೆ ಚೀನಾದ ವಾಂಗ್ ಶುವಾನ್‌ಫೇಯಿ.

ಚಾಟಿಯೊಂದನ್ನು ಒಂದೇ ಬಾರಿ ಬೀಸಿ, ಒಮ್ಮೆಲೇ ಉರಿಯುತ್ತಿರುವ 42 ಮೋಂಬತ್ತಿಗಳನ್ನು ಆರಿಸಿದ ಶುವಾನ್‌ಫೆಯಿ ನೂತನ ಗಿನ್ನೆಸ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಒಂದೇ ಚಾಟಿ ಏಟಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮೋಂಬತ್ತಿಗಳನ್ನು ಆರಿಸಿದ ದಾಖಲೆಯನ್ನು ಶುವಾನ್‌ಫಾಯಿ ತಮ್ಮದಾಗಿಸಿಕೊಂಡಿದ್ದಾರೆ.

ಶುವಾನ್‌ಫೇಯಿರ ಈ ಸಾಹಸವನ್ನು ನಿಧಾನ ಗತಿಯ ವಿಡಿಯೋದಲ್ಲಿ ತೋರುತ್ತಿರುವ ಪೋಸ್ಟ್ ಶೇರ್‌ ಮಾಡಿದ ಗಿನ್ನೆಸ್ ವಿಶ್ವ ದಾಖಲೆಗಳ ಟ್ವಿಟರ್‌ ಪುಟವು, “ಈ ದಾಖಲೆಯನ್ನು ನಮ್ಮ ತಂಡ ರಾತ್ರೋರಾತ್ರಿ ಮಾನ್ಯೀಕರಿಸಿದೆ: ಒಂದೇ ಚಾಟಿ ಏಟಿಗೆ ಅತಿ ಹೆಚ್ಚು ಮೋಂಬತ್ತಿಗಳನ್ನು ಆರಿಸಿರುವುದು – ಚೀನಾದ ವಾಂಗ್‌ ಶೂವಾನ್‌ಫೇಯಿರಿಂದ 42. ಈ ಸ್ಲೋ-ಮೋ ಶೆಫ್‌ರ ಕಿಸ್ ಅಷ್ಟೇ,” ಎಂದು ಪೋಸ್ಟ್ ಮಾಡಿದೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನ ಆಂಟೋನಿ ಕೆಲ್ಲಿ ಒಂದೇ ಒಂದು ಕೈಬೀಸುವಿಕೆಯಲ್ಲಿ 37 ಮೋಂಬತ್ತಿಗಳನ್ನು ಆರಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...