alex Certify ಅರುಣಾಚಲ ಪ್ರದೇಶದ ಯುವಕನ ಅಪಹರಿಸಿದ ಚೀನಾ: ಭಾರತೀಯ ಸೇನೆಯಿಂದ ಮಹತ್ವದ ಹೆಜ್ಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರುಣಾಚಲ ಪ್ರದೇಶದ ಯುವಕನ ಅಪಹರಿಸಿದ ಚೀನಾ: ಭಾರತೀಯ ಸೇನೆಯಿಂದ ಮಹತ್ವದ ಹೆಜ್ಜೆ

ಅರುಣಾಚಲ ಪ್ರದೇಶದ 17 ವರ್ಷದ ಮಿರಾಮ್ ಟ್ಯಾರೋನ್ ಎಂಬ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಸಂಪರ್ಕಿಸಿದೆ ಮತ್ತು ಆತನನ್ನು ಹಿಂದಿರುಗಿಸುವಂತೆ ಕೋರಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಭಾರತೀಯ ಸೇನೆಯು ತಕ್ಷಣವೇ, ಎರಡು ಸೇನೆಗಳ ನಡುವೆ ಸ್ಥಾಪಿತವಾಗಿರುವ ಹಾಟ್‌ಲೈನ್ ಕಾರ್ಯವಿಧಾನದ ಮೂಲಕ PLA ಅನ್ನು ಸಂಪರ್ಕಿಸಿದೆ. ಗಿಡಮೂಲಿಕೆಗಳನ್ನು ಸಂಗ್ರಹಿಸುವ ಮತ್ತು ಬೇಟೆಯಾಡುವ ವ್ಯಕ್ತಿಯೊಬ್ಬರು ದಾರಿ ತಪ್ಪಿದ್ದಾರೆ ಅವರಿನ್ನು ಪತ್ತೆಯಾಗಿಲ್ಲ. ಪ್ರೋಟೊಕಾಲ್ ಪ್ರಕಾರ, ನಿಮ್ಮ ಗಡಿಯಲ್ಲಿ ಪತ್ತೆಯಾಗಿ ನೀವು ವಶಕ್ಕೆ ಪಡೆದಿದ್ದರೆ ಹಿಂತಿರುಗಿಸಿ ಎಂದು ಕೇಳಿಕೊಂಡಿದೆ. ಇಲ್ಲವೆ ಆ ವ್ಯಕ್ತಿಯನ್ನ ಪತ್ತೆಹಚ್ಚಲು ಸಹಾಯ ಮಾಡಿ ಎಂದು ಚೀನಾ ಸೇನೆಯ ಸಹಾಯ ಕೋರಲಾಗಿದೆ ಎಂದು ವರದಿಯಾಗಿದೆ‌.

ಚೀನಾ ಸೇನೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಟ್ಯಾರನ್ ಅವರ ಸ್ನೇಹಿತ ಜಾನಿ ಯಾಯಿಂಗ್, ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ವರದಿಯಾಗಿದೆ. ಅರುಣಾಚಲ ರಾಜ್ಯದ ಸಂಸದ ತಪಿರ್ ಗಾವೊ ಅವರು ಬುಧವಾರ ಟ್ವೀಟ್‌ ಮಾಡುವ ಮೂಲಕ ಮಿರಾಮ್ ಅಪಹರಣದ ಬಗ್ಗೆ ಮಾಹಿತಿ ನೀಡಿದ್ದರು. ಚೀನಾದ ಆರ್ಮಿ, ಸಿಯಾಂಗ್ ಜಿಲ್ಲೆಯ, ಸಿಯುಂಗ್ಲಾದ ಜೋರ್ ಪ್ರದೇಶದಿಂದ 17 ವರ್ಷದ ಬಾಲಕನನ್ನು ಅಪಹರಿಸಿದೆ ಎಂದು ಟ್ವೀಟ್ ಮಾಡಿದ್ದರು.

ಮೊಬೈಲ್​ ಬಳಕೆದಾರರ ಗಮನಕ್ಕೆ: ಇಂದಿನಿಂದ ಕಾರ್ಯ ನಿರ್ವಹಿಸೋದಿಲ್ಲ ಈ ಸಿಮ್..!

ತ್ಸಾಂಗ್ಪೋ ನದಿ ಭಾರತವನ್ನು ಪ್ರವೇಶಿಸುವ ಸ್ಥಳದ ಬಳಿ ಈ ಘಟನೆ ನಡೆದಿದೆ ಎಂದು ಸಂಸದ ಗಾವೋ ಹೇಳಿದ್ದಾರೆ. ತ್ಸಾಂಗ್ಪೋವನ್ನು ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಮತ್ತು ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ.

ಘಟನೆಯ ಬಗ್ಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಅವರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ಗಾವೊ ಮಾಹಿತಿ ನೀಡಿದ್ದಾರೆ. ಈ ರೀತಿಯ ಘಟನೆ ನಡೆದಿರುವುದು ಇದೆ ಮೊದಲಲ್ಲ. 2020 ರಲ್ಲಿ, ಐದು ಅರುಣಾಚಲ ಪ್ರದೇಶದ ನಾಗರಿಕರನ್ನ ಚೀನಾ ಸೇನೆ ವಶಪಡಿಸಿಕೊಂಡಿತ್ತು. ಆನಂತರ ಅವ್ರನ್ನ‌ ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...