alex Certify SHOCKING NEWS: ಕೊರೊನಾ ಸೋಂಕು ವಿಶ್ವಕ್ಕೆ ಹರಡಿದ್ದ ಚೀನಾದಿಂದ ಮತ್ತೊಂದು ಆಘಾತಕಾರಿ ಸುದ್ದಿ; H10N3 ವೈರಸ್ ವ್ಯಕ್ತಿಯಲ್ಲೂ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕೊರೊನಾ ಸೋಂಕು ವಿಶ್ವಕ್ಕೆ ಹರಡಿದ್ದ ಚೀನಾದಿಂದ ಮತ್ತೊಂದು ಆಘಾತಕಾರಿ ಸುದ್ದಿ; H10N3 ವೈರಸ್ ವ್ಯಕ್ತಿಯಲ್ಲೂ ಪತ್ತೆ

ಬೀಜಿಂಗ್: ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದ್ದ ಚೀನಾದಿಂದ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಹಕ್ಕಿಜ್ವರದ ರೂಪಾಂತರ ವೈರಸ್ H10N3 ಸೋಂಕು ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ.

ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬರಲ್ಲಿ ಈ ವೈರಸ್ ಪತ್ತೆಯಾಗಿದ್ದಾಗಿ ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಜ್ವರ ಹಾಗೂ ಇನ್ನಿತರ ಅನಾರೋಗ್ಯ ಹಿನ್ನೆಲೆಯಲ್ಲಿ ಏಪ್ರಿಲ್ 28ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಹಕ್ಕಿಜ್ವರದ ರೂಪಾಂತರಿ ವೈರಸ್ ದೃಢಪಟ್ಟಿದೆ.

ಇದು ವ್ಯಕ್ತಿಯಲ್ಲಿ ಹರಡಿದ್ದಾದರೂ ಹೇಗೆ ಎಂಬ ಬಗ್ಗೆ ಚೀನಾ ಮಾಹಿತಿ ನೀಡಿಲ್ಲ. H10N3 ಕಡಿಮೆ ರೋಗಕಾರಕ ಗುಣ ಹೊಂದಿದ್ದು, ಇತರ ವೈರಸ್ ಗಳಿಗೆ ಹೋಲಿಸಿದರೆ ಅಷ್ಟೊಂದು ವೇಗವಾಗಿ ಹರಡುವುದಿಲ್ಲ. ಸಧ್ಯ ರೋಗಿ ಚೇತರಿಸಿಕೊಂಡಿದ್ದಾಗಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...