alex Certify Big News: ಚೀನಾದಲ್ಲಿ ಹಕ್ಕಿಜ್ವರದ ಹೊಸ ತಳಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಚೀನಾದಲ್ಲಿ ಹಕ್ಕಿಜ್ವರದ ಹೊಸ ತಳಿ ಪತ್ತೆ

ಬೀಜಿಂಗ್: ಹಕ್ಕಿಜ್ವರದ ಹೊಸ ತಳಿ H3N8 ಚೀನಾದಲ್ಲಿ ಪತ್ತೆಯಾಗಿದೆ. ಚೀನಾದ ಹೆನಾನ್ ಪ್ರಾಂತದಲ್ಲಿ ನಾಲ್ಕು ವರ್ಷದ ಬಾಲಕ ಸೋಂಕು ಪೀಡಿತನಾಗಿದ್ದಾನೆ ಎಂದು ಚೀನಾದ ಆರೋಗ್ಯ ಸಚಿವಾಲಯವು ವರದಿ ಮಾಡಿದೆ.

ಆದರೆ, ಇದು ಮನುಷ್ಯರ ನಡುವೆ ಹರಡುವ ಅಪಾಯ ಕಡಿಮೆ ಇದೆ ಎಂದೂ ತಿಳಿಸಿದೆ. ಬಾಲಕನಲ್ಲಿ ಏ. 5ರಂದು ಜ್ವರದ ಲಕ್ಷಣಗಳು ಗೋಚರಿಸಿದ್ದವು, ಈತನ ಜತೆ ನಿಕಟವಾಗಿ ಸಂಪರ್ಕದಲ್ಲಿದ್ದ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ, ಮನೆಯಲ್ಲಿ ಸಾಕಿದ್ದ ಕೋಳಿಗಳು ಮತ್ತು ಕಾಗೆಗಳಿಂದ ಬಾಲಕ ಸೋಂಕಿತನಾಗಿದ್ದಾನೆ ಎಂದು ವರದಿಯಾಗಿದೆ.

ನಮಾಜ್ ಸಲ್ಲಿಸುತ್ತಿರುವ ಭಾರತೀಯ ಸೇನಾಧಿಕಾರಿಗಳ ಫೋಟೋ ವೈರಲ್

ಈ ಮೊದಲು ಜಗತ್ತಿನ ಇತರ ಭಾಗಗಳಲ್ಲಿ H3N8 ವೈರಸ್ ಕುದುರೆಗಳು, ನಾಯಿಗಳು, ಹಕ್ಕಿಗಳು ಮತ್ತು ಸೀಲ್‌ಗಳಲ್ಲಿ ಪತ್ತೆಯಾಗಿತ್ತು, ಮನುಷ್ಯರಲ್ಲಿ ಇದೇ ಮೊದಲ ಬಾರಿಗೆ ಕಂಡುಬಂದಿದೆ. ಚೀನಾದಲ್ಲಿ ಕೋಳಿ ಫಾರಂಗಳಲ್ಲಿ ಕೆಲಸ ಮಾಡುವ ಕೆಲವರಲ್ಲಿ ಹಕ್ಕಿಜ್ವರದ ವಿವಿಧ ಪ್ರಭೇದಗಳು ಪತ್ತೆಯಾಗಿವೆ. ಕಳೆದ ವರ್ಷ ಚೀನಾ H10N3 ಪ್ರಭೇದದ ಮೊದಲ ಪ್ರಕರಣವನ್ನು ವರದಿ ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...