alex Certify ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನಲ್ಲಿ ನಾಯಿಗೆ ವಿಶೇಷ ಸೀಟು: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನಲ್ಲಿ ನಾಯಿಗೆ ವಿಶೇಷ ಸೀಟು: ವಿಡಿಯೋ ವೈರಲ್​

ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನ ಮೊದಲ ಆವೃತ್ತಿಯು ಮುಂಬೈನಲ್ಲಿ ಫೆಬ್ರವರಿ 24 ರಿಂದ ಫೆಬ್ರವರಿ 26 ರ ನಡುವೆ ನಡೆಯಿತು. ಈ ಕಾರ್ಯಕ್ರಮವು ಭಾರತದ ಶ್ರೀಮಂತ ಸಂಗೀತ ಮತ್ತು ಸಾಂಸ್ಕೃತಿಕ ಬೇರುಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ 10 ಕಲಾವಿದರಿಂದ ಪ್ರದರ್ಶನಗಳನ್ನು ಒಳಗೊಂಡಿತ್ತು.

ಪ್ರದರ್ಶನಗಳ ಜೊತೆಗೆ, ಕಂಪೆನಿಯ ಅಧ್ಯಕ್ಷರ ಗಮನವನ್ನು ಕದ್ದದ್ದು ವಿಶ್ರಾಂತಿ ಪಡೆಯುತ್ತಿರುವ ಸಾಕು ನಾಯಿಯ ಛಾಯಾಚಿತ್ರ. ಭಾನುವಾರ ಸಂಜೆ, ಆನಂದ್ ಮಹೀಂದ್ರಾ ಆನ್‌ಲೈನ್‌ನಲ್ಲಿ ಈ ಕ್ಷಣವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ನಾಯಿಗೆ ಆಸನವನ್ನು ಕಾಯ್ದಿರಿಸಿರುವುದನ್ನು ನೋಡಬಹುದಾಗಿದೆ.

ಕಾರ್ಯಕ್ರಮದ ಅಂತಿಮ ದಿನದಂದು ಭಾಗವಹಿಸಿದ್ದ ಆನಂದ್ ಮಹೀಂದ್ರಾ, ಕಾಯ್ದಿರಿಸಿದ ಸೀಟಿನಲ್ಲಿ ನಾಯಿ ವಿಶ್ರಾಂತಿ ಪಡೆಯುವುದನ್ನು ನೋಡಿ ಆಶ್ಚರ್ಯಚಕಿತರಾದರು. ಆ ಕ್ಷಣದ ಫೋಟೋ ತೆಗೆದು ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
“ನಾನು ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ಗಳ ಅಂತಿಮ ದಿನದಂದು ಬಾಂದ್ರಾ ಫೋರ್ಟ್ ಆಂಫಿಥಿಯೇಟರ್‌ನಲ್ಲಿದ್ದೇನೆ. ಇಲ್ಲಿ ನಾಯಿಗೆ ಸೀಟು ಕಾಯ್ದಿರಿಸಿರುವುದು ನೋಡಿ ಅಚ್ಚರಿಯಾಯಿತು ಎಂದಿದ್ದಾರೆ. ಈ ಚಿತ್ರಕ್ಕೆ ಲಕ್ಷಕ್ಕೂ ಹೆಚ್ಚು ವ್ಯೂವ್ಸ್​ಗಳು ಬಂದಿದ್ದು, ಜನರು ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...